Breaking News

ನಕಲಿ ಜಾತಿ ಪ್ರಮಾಣಪತ್ರ: ವಿಚಾರಣೆಗೆ ಹಾಜರಾಗದ ಕೆಂಪಯ್ಯ

Spread the love

ಬೆಂಗಳೂರು, ಏಪ್ರಿಲ್ 26: ಕೆಂಪಯ್ಯನವರಿಗೆ ವಿಚಾರಣೆಗೆ ಹಾಜರಾಗುವಂತೆೆ ನೋಟೀಸ್ ನೀಡಲಾಗಿತ್ತು. ಆದರೆ ಕೆಂಪಯ್ಯನವರು ವಿಚಾರಣೆಗೆ ಹಾಜರಾಗಿಲ್ಲ ಡಿಐಜಿ ಡಾ. ರವೀಂದ್ರನಾಥ್ ಹೇಳಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯರ ಸುಳ್ಳು ಜಾತಿ ಪತ್ರ ಪ್ರಕರಣದ ಕಡತವೇ ಕಣ್ಮರೆಯಾಗಿತ್ತು.

ಈ ಪ್ರಕರಣದ ಕಡತವನ್ನು ಹುಡುಕಿಸಲಾಗಿದೆ. ಕಡತ ನಾಪತ್ತೆಯಾಗಲು ಕಾರಣವಾಗಿದ್ದ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಕೆಂಪಯ್ಯನವರಿಗೆ ವಿಚಾರಣೆಗೆ ಹಾಜರಾಗುವಂತೆೆ ನೋಟೀಸ್ ನೀಡಲಾಗಿತ್ತು. ಆದರೆ, ಕೆಂಪಯ್ಯನವರು ವಿಚಾರಣೆಗೆ ಹಾಜರಾಗಿಲ್ಲ. ಕೆಂಪಯ್ಯನವರ ಮನೆಗೆ ನೋಟೀಸ್ ಅಂಟಿಸಿ ಬರಲಾಗಿದೆ ಎಂದು ಅವರು ಮಂಗಳವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದರೇ ಕ್ರಿಮಿನಲ್ ಕೇಸ್

ಸುಳ್ಳು ಜಾತಿ ಪ್ರಮಾಣಪತ್ರವನ್ನು ಪಡೆದರೆ ಅಂಥವರ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತದೆ. ಸದ್ಯ 1097 ಜನರ ವಿರುದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿದ್ದೇವೆ. 89 ಜನ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದರು. ಇವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉದ್ಯೋಗದಿಂದ ವಜಾ ಮಾಡಲಾಗಿದೆ. ಆರ್ಟಿಕಲ್ 311 ಪ್ರಕಾರ ಯಾವುದೇ ಸರ್ಕಾರಿ ಉದ್ಯೋಗಿಯನ್ನು ವಿಚಾರಣೆ ನಡೆಸದೇ ವಜಾಗೊಳಿಸುವಂತಿಲ್ಲ. ಇಷ್ಟೇ ಅಲ್ಲದೇ 111 ತಹಸೀಲ್ದಾರೆ, 108ಕಂದಾಯ ಲೆಕ್ಕಿಗರು, 107 ಗ್ರಾಮ ಲೆಕ್ಕಿಗರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದೇವೆ. ಸಂವಿಧಾನದಲ್ಲಿ ಯಾರಿಗೆ ಹಕ್ಕು ನೀಡಲಾಗಿದೆಯೋ ಅವರೇ ಹಕ್ಕು ಪಡೆೆಯಬೇಕು ಎಂದು ಡಿಐಜಿ ಡಾ. ರವೀಂದ್ರನಾಥ್ ಸ್ಪಷ್ಟಪಡಿಸಿದರು.

ಐಎಎಸ್ ಅಧಿಕಾರಿಯೊಬ್ಬರು ವಿಚಾರಣೆಗೆ ಹಾಜರಾಗಿದ್ದರು..!

ಬೀದರ್‌ನಲ್ಲಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ರಾಮಚಂದ್ರ ಎಂಬುವವರಿಗೂ ನೋಟೀಸ್ ನೀಡಲಾಗಿತ್ತು. ಅವರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆೆ 101 ಪ್ರಕರಣಗಳು ಬಾಕಿ ಇದ್ದವು. ಅವರು ವಿಚಾರಣೆ ಮಾಡಿ ವರದಿಯನ್ನು ನೀಡಬೇಕಿತ್ತು. ಆದರೆ ಅವರು ವಿಚಾರಣೆಯನ್ನು ಮಾಡಿರಲಿಲ್ಲ. ಹೀಗಾಗಿ ನೋಟೀಸ್ ನೀಡಲಾಗಿತ್ತು. ರಾಮಚಂದ್ರರವರು ವಿಚಾರಣೆಗೆ ಹಾಜರಾಗಿ ವಿವರಣೆಯನ್ನು ನೀಡಿದ್ದಾರೆ ಎಂದು ಡಿಐಜಿ ಸ್ಪಷ್ಟಪಡಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಸರ್ಕಾರಿ ಉದ್ಯೋಗಿಗಳ ವಿರುದ್ದ ಕ್ರಮವೇನು..?

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಸರಕಾರಿ ಉದ್ಯೋಗವನ್ನು ಪಡೆದು ಸಕಲ ಸವಲತ್ತುಗಳನ್ನು ಪಡೆದವರ ಮೇಲಿನ ಆರೋಪ ಸಾಬೀತಾದರೇ ತಕ್ಷಣವೇ ಉದ್ಯೋಗದಿಂದ ವಜಾ ಮಾಡಲಾಗುತ್ತದೆ. ಉದ್ಯೋಗಿಯಾಗಿದ್ದರು ನಿವೃತ್ತಿಯಾಗಿದ್ದರೆ ಪಿಂಚಣಿ ಸಹಿತ ಎಲ್ಲಾ ಸವಲತ್ತು ಹಿಂಪಡೆಯಲಾಗುತ್ತದೆ ಎಂದು ಡಿಐಜಿ ಡಾ. ರವೀಂದ್ರನಾಥ್ ವಿವರಣೆ ನೀಡಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ