ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದೆ. ಈ ಪ್ರಕರಣದ ಹಲವರ ಕೈವಾಡವಿದ್ದು, ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಇದೇ ಪ್ರಕರಣದಕ್ಕೆ ಸಂಬಂಧಿಸಿದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅದೇನೆಂದರೆ, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂಟೂತ್ ಅನ್ನು ಒಡಿಶಾದಲ್ಲಿ ಖರೀದಿಸಲಾಗಿದೆ ಎಂಬ ಸಂಗತಿ ಬಯಲಾಗಿದೆ.
ಅಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲ ಬ್ಲೂಟೂತ್ ಬಳಸಿ ಪರೀಕ್ಷೆ ಎದುರಿಸಿರುವುದು ತನಿಖೆಯಿಂದ ಬಯಲಾಗುತ್ತಿದೆ. ಅಭ್ಯರ್ಥಿಗಳು ಬಳಸಿದ ಬ್ಲೂಟೂತ್ಗಳನ್ನು ಓಡಿಶಾದಲ್ಲಿ ಖರೀದಿ ಮಾಡಲಾಗಿದೆ. ಪ್ರಕರಣದ ಕಿಂಗ್ಪಿನ್ ಆರ್.ಡಿ. ಪಾಟೀಲ್ ಒಂದೆ ಬಾರಿ 50ಕ್ಕೂ ಅಧಿಕ ಬ್ಲೂಟೂತ್ ಖರೀದಿ ಮಾಡಿದ್ದಾನೆ.
ತಲಾ ಒಂದು ಬ್ಲೂಟೂತ್ಗೆ 1500-2000 ರೂಪಾಯಿ ಕೊಟ್ಟು ಖರಿದಿಸಿದ್ದ. ಇದೀಗ ಅಕ್ರಮಕ್ಕೆ ಬಳಸುತ್ತಿದ್ದ ಡಿವೈಸ್ ಫೋಟೊ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ. ಇದೇ ಬ್ಲೂಟೂತ್ ಡಿವೈಸ್ ಬಳಸಿ ಆರೋಪಗಳು ಅಕ್ರಮ ಎಸಗಿದ್ದಾರೆ.
ಬ್ಲೂಟೂತ್ ಬಳಕೆ ಹೇಗೆ ಮಾಡುತ್ತಿದ್ದರು?
ಅಭ್ಯರ್ಥಿಗಳು ಬ್ಲೂಟೂತ್ ಡಿವೈಸ್ ಅನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆಯುವ ಮುನ್ನವೇ ಹೊರಗಡೆಯಿಂದಲೇ ಕಾಲ್ ರಿಸೀವ್ ಮಾಡಿಕೊಂಡು ಹೋಗುತ್ತಿದ್ದರು. ಸರಿಯಾಗಿ ಕಾಣದಂತಹ ಸಣ್ಣದಾದ ಬ್ಲೂಟೂತ್ ಸ್ಪೀಕರ್ ಅನ್ನು ಕಿವಿಗೆ ಅವಳವಡಿಸಿಕೊಂಡು ಹೊರಗಿನಿಂದ ಹೇಳಿದ ಉತ್ತರವನ್ನು ಪರೀಕ್ಷಾ ಕೇಂದ್ರದ ಒಳಗಡೆ ಕುಳಿತು ಬರೆಯುತ್ತಿದ್ದರು.
ಕಲಬುರಗಿಯ ಅಫಜಲಪುರದಲ್ಲಿರುವ ಕಿಂಗ್ಪಿನ್ ಆರ್.ಡಿ. ಪಾಟೀಲ್ ಮನೆ ಮೇಲೆ ದಾಳಿ ಮಾಡಿದ ಸಂಧರ್ಬದಲ್ಲಿ ಒಟ್ಟು 7 ಬ್ಲೂಟೂತ್ ಡಿವೈಸ್ಗಳು ಪತ್ತೆಯಾಗಿವೆ