ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದು ಜಿಲ್ಲಾ ಪ್ರವಾಸದಲ್ಲಿ, ತಾಳಿಕೋಟೆ ತಾಲೂಕಿನ ಬಂಟನೂರು ಗ್ರಾಮಕ್ಕೆ ಭೇಟಿ ನೀಡಿದರು. ಸಿಎಂ ಕಂಡಂತ ರೈತರು ಆತ್ಮೀಯವಾಗಿ ಬರಮಾಡಿಕೊಂಡದು. ಅಲ್ಲದೇ ರೈತರೊಬ್ಬರು ಜೋಡೆತ್ತುಗಳನ್ನು ಸಿಎಂ ಬೊಮ್ಮಾಯಿಗೆ ಗಿಫ್ಟ್ ಆಗಿ ನೀಡಿದ್ರು.
ಹೀಗೆ ನೀಡಿದಂತ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿದಾಗ ನಡೆದಂತ ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗುವಂತೆ ಆಯ್ತು
ಇದೇ ಸಂದರ್ಭದಲ್ಲಿ ಹೊರಗೆ ಗದ್ದಲ ಹೆಚ್ಚಾಗುತ್ತಿದ್ದಂತೆ ಬೆದರಿದಂತ ಎತ್ತೊಂದು, ಮುನ್ನುಗ್ಗಿ, ಸಿಎಂ ಬೊಮ್ಮಾಯಿಗೆ ತಿವಿಯೋದಕ್ಕೆ ಯತ್ನಿಸಿತು. ಆಗ ಅಲ್ಲಿಯೇ ಇದ್ದಂತ ಎಎಸ್ಪಿಯವರು ಎತ್ತಿನ ಕೊಂಬನ್ನು ಇಡಿದು, ಬೊಮ್ಮಾಯಿಯನ್ನು ತಿವಿತದಿಂದ ಪಾರು ಮಾಡಿದರು.