ಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ಗೆ ಈಗಲೇ ಅಪಾರ ಅಭಿಮಾನಿ ಬಳಗವಿದೆ. ಸ್ಟಾರ್ಕಿಡ್ನ ಬಾಲಿವುಡ್ ಪ್ರವೇಶದ ಬಗ್ಗೆ ಬಿಟೌನ್ನಲ್ಲಿ ಕುತೂಹಲಕರ ಚರ್ಚೆಗಳು ನಡೆಯುತ್ತಿವೆ.ಬಾಲಿವುಡ್‌ನ ಸೆಳೆತ ಯಾರನ್ನ ಬಿಟ್ಟಿಲ್ಲ ಹೇಳಿ.
ಅದರಲ್ಲೂ ಸ್ಟಾರ್ಕಿಡ್ಗಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಕನಸು ಕಾಣುತ್ತಾರೆ. ಈ ಸಾಲಿನಲ್ಲಿ ಈಗ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ (Sara Tendulkar) ಹೆಸರೂ ಕಾಣಿಸಿಕೊಂಡಿದೆ. ಸಾರಾ 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಹೊಸ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. ಇದೇ ಕಾರಣದಿಂದ ಅವರ ಫಾಲೋವರ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಸಾರಾ ಬಾಲಿವುಡ್ ಪ್ರವೇಶದ ಬಗ್ಗೆ ಬಿಟೌನ್ನಲ್ಲಿ ಕುತೂಹಲಕರ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಲೈಫ್ ಈ ಬಗ್ಗೆ ವರದಿ ಮಾಡಿದ್ದು, ಸಾರಾ ಶೀಘ್ರದಲ್ಲೇ ಬಾಲಿವುಡ್ಗೆ ಪ್ರವೇಶ ಮಾಡುತ್ತಾರಂತೆ. ನಟನೆಯ ತರಬೇತಿಯನ್ನೂ ಸಾರಾ ಪಡೆಯುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ. ”ಸಾರಾ ನಟನೆಯ ಬಗ್ಗೆ ಇದುವರೆಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಅವರು ಅಪಾರ ಪ್ರತಿಭಾವಂತೆ. ಎಲ್ಲರನ್ನೂ ಚಕಿತಗೊಳಿಸುವ ಸಾಮರ್ಥ್ಯ ಅವರಲ್ಲಿದೆ. ಸಾರಾರ ನಟನೆಯ ಆಸಕ್ತಿಗೆ ಪೋಷಕರೂ ಬೆಂಬಲ ನೀಡಿದ್ದಾರೆ” ಎಂದಿದೆ ವರದಿ.