ಬೆಂಗಳೂರು: ಐಪಿಎಸ್ ಹಿರಿಯ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಘವೇಂದ್ರ ಡಿ ಚನ್ನಣ್ಣನವರ್ ಪತ್ನಿ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಪತಿ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿದ್ದಾರೆ. 2015 ರಲ್ಲಿ ರಾಘವೇಂದ್ರ ಡಿ ಚನ್ನಣ್ಣನವರ್ ರೋಜಾ ಎಂಬುವವರನ್ನ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿ ಬಿಟ್ಟು ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ಆರೋಪ ಮಾಡಲಾಗಿದೆ.
ಅಲ್ಲದೇ ರವಿ ಚನ್ನಣ್ಣನವರ್ ಈ ಮದುವೆಗೆ ಪ್ರತ್ಯಕ್ಷ ಕಾರಣರಾಗಿದ್ದಾರೆ. ಪ್ರಾರಂಭದಲ್ಲಿ ಸಮಯ ಹೀಗೆಲ್ಲ ಮಾಡ್ತಿದೆ ನೀನು ನಿನ್ನ ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದಿದ್ದರು. ಆದರೀಗ ಬಾಳುವುದಾದರೆ ರುಕ್ಮಿಣಿಯೊಂದಿಗೆ ಬಾಳು ಎಂದು ಹೇಳುತ್ತಿದ್ದಾರೆ. ರಾಘವೇಂದ್ರ, ಅಣ್ಣನ ಹೆಸರು ಬಳಸಿ ಹಲವಾರು ಕ್ರೈಂ ನಲ್ಲಿ ಭಾಗಿಯಾಗಿದ್ದಾರೆ. ಆ ಮಹಿಳೆ ಹಾಗೂ ಅವರ ಸಹೋದರರಿಂದ ನನಗೆ ಬೆದರಿಕೆ ಇದೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ.