ಮೈಸೂರು: ‘ಯಾವನ್ರೀ ಅವ ಪ್ರಮೋದ್ ಮುತಾಲಿಕ್? ಪಂಚಾಯಿತಿ ಸದಸ್ಯ ಅಥವಾ ಮುನ್ಸಿಪಾಲಿಟಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇದೆಯಾ? ಸರ್ಕಾರಕ್ಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗಲ್ಲ ಅಂದರೆ ಏನರ್ಥ?’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಸಹಾಕಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಆಡಳಿತವನ್ನು ಕೆಲವು ಸಂವಿಧಾನಯೇತರ ಶಕ್ತಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದು ದುರದೃಷ್ಟಕರ. ರಾಜ್ಯದಲ್ಲಿ ಮುತಾಲಿಕ್ ಸರ್ಕಾರ ಇದೆಯಾ? ಆರ್‌ಎಸ್‌ಎಸ್ ಸರ್ಕಾರ ಇದೆಯಾ? ಅಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ರಾಜ್ಯದಲ್ಲಿ ಬುಲ್ಡೋಡರ್ ಮಾದರಿ ಅನುಸರಿಸುವುದು ಸರಿಯಲ್ಲ. ಸರ್ಕಾರ ಜನರ ಬದುಕನ್ನು ಕಟ್ಟಬೇಕೇ ಹೊರತು, ಬದುಕನ್ನು ಕಸಿದುಕೊಳ್ಳಬಾರದು’ ಎಂದರು.