ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಖಡಕ್ ಐಪಿಎಸ್ ಅಧಿಕಾರಿಗೆ ಕೆಲ ವಹಿಸಲು ಮುಂದಾಗಿದೆ ಎನ್ನಲಾಗಿದೆ.
ಸಾಮನ್ಯವಾಗಿ ಬೆಂಗಳೂರಿನ ಪೊಲೀಸ್ ಕಮಿಷನರ್‌ಗಳನ್ನು ಪ್ರತಿ ವರ್ಷ ಬದಲಾಯಿಸಲಾಗುತ್ತದೆ. ಆದರೆ ಸದ್ಯ ಇರುವ ಕಮಲ್ ಪಂತ್ ಅವರನ್ನು ಕೋವಿಡ್ ಬಳಿಕ ನಡೆದ ಕಾರಣಗಳಿಂದಾಗಿ ಇನ್ನೂ ಅಧಿಕಾರದಲ್ಲಿ ಇದ್ದಾರೆ. ಈ ಹಿಂದೆ ಅಲೋಕ್ ಕುಮಾರ್ ಅವರು ಜೂನ್ ನಿಂದ ಆಗಸ್ಟ್ 2019 ರವರೆಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು, ಅವರ ಕಾಲವಾಧಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ಅಕ್ರಮಗಳಿಗೆ ಕಡಿವಾಣ ಬೀಳಾಗಿತ್ತು.