Breaking News

ಹುಬ್ಬಳ್ಳಿ- ಬೆಂಗಳೂರ ರೈಲು ಪ್ರಯಾಣಿಕರಿಗೆ ‘ಗುಡ್ ‌ನ್ಯೂಸ್’

Spread the love

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟದ ಪ್ರಧಾನ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ನಡುವಿನ ರೈಲ್ವೆ ಪ್ರಯಾಣ ಶೀಘ್ರವೇ ಒಂದು ತಾಸು ಕಡಿಮೆಯಾಗಲಿದೆ.

ಸೌತ್ ವೆಸ್ಟ್ರನ್ ರೈಲ್ವೆಯು ಹುಬ್ಬಳ್ಳಿ – ಬೆಂಗಳೂರು ನಡುವಿನ ರೈಲ್ವೆ ಮಾರ್ಗವನ್ನು ಡಬಲಿಂಗ್ ಹಾಗೂ ವಿದ್ಯುದೀಕರಣಗೊಳಿಸುತ್ತಿದ್ದು, ಈ ಕೆಲಸ ಕೊನೆ ಹಂತ ತಲುಪಿದೆ.

2023ರ ಮಾರ್ಚ್ ಒಳಗಾಗಿ ಇದು ಪೂರ್ಣಗೊಳ್ಳುತ್ತದೆ. ಬಳಿಕ ರೈಲು ಸಂಚಾರ ವೇಗ ಹೆಚ್ಚಳಗೊಳ್ಳಲಿದೆ.

ಬೆಂಗಳೂರು ಹುಬ್ಬಳ್ಳಿ ನಡುವೆ 469 ಕಿಲೋ ಮೀಟರ್ ಇದ್ದು, ಪ್ರತಿನಿತ್ಯ ಒಂಬತ್ತು ರೈಲು, ಈ ಸೆಕ್ಷನ್‌ನಲ್ಲಿ ಒಟ್ಟಾರೆ 24 ರೈಲು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಪ್ರಸ್ತುತ ಇರುವ ರೈಲುಗಳಲ್ಲಿ ಜನಶತಾಬ್ದಿಯು ಅತಿ ವೇಗದ ಸಂಚರಿಸುವ ರೈಲಾಗಿದ್ದು, ಇದು ಏಳು ತಾಸು ತೆಗೆದುಕೊಳ್ಳಲಿದೆ.

ರೈಲ್ವೆ ಇಲಾಖೆ ಪ್ರಕಾರ ಈ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣವಾದ ಬಳಿಕ ರೈಲಿನ ಪ್ರಯಾಣ ಅವಧಿ ಮುಕ್ಕಾಲು ಗಂಟೆಯಿಂದ ಒಂದು ತಾಸು ಕಡಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

Spread the loveಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ