Breaking News

ಸಂತೋಷ್ ಆತ್ಮಹತ್ಯೆ ಮಾಡಿದ್ದ ಲಾಡ್ಜ್ ನಲ್ಲಿ ಮತ್ತೋರ್ವ ಯುವಕನ ಆತ್ಮಹತ್ಯೆ!

Spread the love

ಉಡುಪಿ: ಕೆಲವು ದಿನಗಳ ಹಿಂದಷ್ಟೇ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಲಾಡ್ಜ್‌ ನಲ್ಲಿ ಇಂದು ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಣಾಜೆಯ ಶರಣ್ ರಾಜ್ (31 ವ) ಎಂದು ಗುರುತಿಸಲಾಗಿಎ.

ಈತ ಮಂಗಳೂರಿನ ಮೆಡಿಕಲ್ ರೆಪ್ ಎಂದು ತಿಳಿದು ಬಂದಿದೆ.

ಹೆಸರು ಬದಲಿಸಿದ ಲಾಡ್ಜ್: ಸಂತೋಷ್‌ ಸಾವನ್ನಪ್ಪಿದ ಶಾಂಭವಿ ಲಾಡ್ಜ್ನ ಹೆಸರನ್ನು ಮಾಲಕರು ಬದಲಾಯಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಒಂದು ರೀತಿಯ ಸಂಚಲನ ಸೃಷ್ಟಿ ಮಾಡಿದ್ದ ಈ ಪ್ರಕರಣದಿಂದ ಲಾಡ್ಜ್ನ ಹೆಸರಿಗೆ ಧಕ್ಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಲಾಡ್ಜ್ನ ಹೆಸರನ್ನು ಬದಲಾಯಿಸಲು ಮಾಲಕರು ನಿರ್ಧರಿಸಿದ್ದು, ಅದರಂತೆ ಹೆಸರು ಬದಲಾವಣೆ ಮಾಡಲಾಗಿದೆ. ಆದರೆ ಇದೀಗ ಮತ್ತೋರ್ವ ಯುವಕ ಆತ್ಮಹತ್ಯೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ