Breaking News

ಅಸಭ್ಯ ವರ್ತಿಸಿದ ಉಪನ್ಯಾಸಕ ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು

Spread the love

ಬೆಳಗಾವಿ: ಉಪನ್ಯಾಸಕನ ವಿರುದ್ಧ ಅಸಭ್ಯ ವರ್ತಿಸಿದ ಆರೋಪ ಕೇಳಿಬಂದಿದ್ದು, ಕಾಲೇಜಿನ ಸ್ಟಾಫ್ ರೂಮ್‌ನಲ್ಲೇ ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಏಪ್ರಿಲ್ 12 ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 

ಕಾಲೇಜಿನ ಖಾಯಂ ಉಪನ್ಯಾಸಕನನ್ನು ಅತಿಥಿ ಉಪನ್ಯಾಸಕಿಯರು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲಿನಿಂದ ಒದ್ದು ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು ನೀಡಲಾಗಿದೆ.

ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸುತ್ತಿದ್ದರು. ಇದಲ್ಲದೆ, ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಅಸಭ್ಯ ವರ್ತಿಸುತ್ತಿದ್ದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ನಾವೇ ಥಳಿಸಿದೆವು ಎಂದು ಉಪನ್ಯಾಸಕಿಯರು ಹೇಳಿಕೊಂಡಿದ್ದಾರೆ.

ಇದೀಗ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿಯ ಮಹಿಳಾ‌ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ