Breaking News

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ದಿನ ನಡೆದಿದ್ದೇನು? ಸ್ನೇಹಿತರಿಂದ ಬಹಿರಂಗ!

Spread the love

ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ಕಮಿಷನ್‌ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಜೊತೆ ಕೊನೆಯ ಕ್ಷಣದಲ್ಲಿದ್ದ ಸ್ನೇಹಿತರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ಸ್ನೇಹಿತರು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

 

ಪೊಲೀಸರ ವಶದಲ್ಲಿರುವ ಸಂತೋಷ್‌ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೇದಪ್ಪ ಹೇಳಿರುವ ನಾವೆಲ್ಲಾ ಬಾರ್ ನಲ್ಲಿ ಕುಡಿದಿದ್ದೆವು. ಸಂತೋಷ್ ಪಾಟೀಲ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು ಎಂದು ವಿವರಿಸಿದ್ದಾರೆ.

ಏಪ್ರಿಲ್ 7ರಂದು ಧಾರವಾಡದಿಂದ ಮೂವರು ಕಾರಿನಲ್ಲಿ ಪಯಣ ಮಾಡಿದೆವು. ಏಪ್ರಿಲ್ 8 ಚಿಕ್ಕಮಗಳೂರಿಗೆ ತಲುಪಿದೆವು. 4 ದಿನ ಚಿಕ್ಕಮಗಳೂರಿನ ಬಾನ್ ಆಫ್ ಬೆರ್ರಿ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದೆವು. ಏಪ್ರಿಲ್ 11ರ ಸಂಜೆ 4 ಗಂಟೆಗೆ ಉಡುಪಿಗೆ ತಲುಪಿದೆವು. ಅಲ್ಲಿ ಶಾಂಭವಿ ಲಾಡ್ಜ್‍ನಲ್ಲಿ ಸಂಜೆ 5 ಗಂಟೆಗೆ ರೂಮ್ ಪಡೆದೆವು.

ಸಂತೋಷ್ ರೂಂ. ನಂಬರ್ 207ರಲ್ಲಿ ಇದ್ದರೆ, ನಾವಿಬ್ಬರು ರೂಂ ನಂಬರ್ 209ರಲ್ಲಿ ತಂಗಿದ್ದೆವು. ಸಂತೋಷ್ ಪಾಟೀಲ್ ಹೆಸರಲ್ಲೇ 2 ರೂಮ್ ಬುಕ್ ಆಗಿತ್ತು. ಸಂಜೆ 7 ಗಂಟೆ ನಂತರ ಡ್ರಿಂಕ್ಸ್ ಮಾಡಲು ಬಾರ್‍ಗೆ ಹೋಗಿವು. ಬಾರ್‍ನಿಂದ ಬರಬೇಕಾದರೆ ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡಿದ್ದರು. ನಾವಿಬ್ಬರೂ ಊಟಕ್ಕೆ ಹೋದೆವು. ಆದರೆ ಸಂತೋಷ್ ಮಾತ್ರ ಲಾಡ್ಜ್‍ಗೆ ಹೋದ. ರಾತ್ರಿ 9:45 ಸುಮಾರಿಗೆ ಡ್ರಿಂಕ್ಸ್ ಮಾಡಿ 209ರಲ್ಲಿ ನಾವಿಬ್ಬರೂ ಮಲಗಿದೆವು.

ಏಪ್ರಿಲ್ 11ರ ರಾತ್ರಿ ಸಂತೋಷ್ ತನ್ನ ಗೆಳೆಯರಿಗೆ ಗುಡ್ ನೈಟ್ ಹೇಳಿದ್ದರು. ಬೆಳಗ್ಗೆ ಎಬ್ಬಿಸಬೇಡಿ ಎಂದಿದ್ದರು. ರಾತ್ರಿ ಮಲಗಿದ್ದ ಸಂತೋಷ್ ಏಪ್ರಿಲ್ 12 ರಂದು ಬೆಳಗ್ಗೆ ಎದ್ದಿರಲಿಲ್ಲ. ನಾವು ಕೊಠಡಿ ಸಂಖ್ಯೆ 209 ರಲ್ಲಿ ಇದ್ದೆವು. ಪಾಟೀಲ್ ಎದ್ದಿಲ್ಲ, ತಿಂಡಿಗೆ ಅಂತ ನಾವು ಇಬ್ಬರು ಹೊರಗೆ ಹೋಟೆಲ್ ಗೆ ಹೋಗಿ ಬಂದೆವು. ಬೆಳಗ್ಗೆ 9:30- 10 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗೆಳೆಯ ಸುನಿಲ್ ಪವಾರ್ ಅವರಿಂದ ಫೋನ್ ಬಂದಿದೆ. ಕರೆ ಮಾಡಿ ಸಂತೋಷ್ ಪಾಟೀಲ್ ಕಾಣೆಯಾದ ಬಗ್ಗೆ ಮೀಡಿಯಾಗಳಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ ಅಷ್ಟರವರೆಗೆ ನಾವಿಬ್ಬರೂ ಮೊಬೈಲ್ ನೋಡಿರಲಿಲ್ಲ.

ತಕ್ಷಣ ಕೊಠಡಿ ಸಂಖ್ಯೆ 207ಕ್ಕೆ ತೆರಳಿ ಬಾಗಿಲು ಬಡಿದಿದ್ದೇವೆ. ಫೋನ್ ಮಾಡಿದ್ದೇವೆ. ಆದರೆ ಎರಡಕ್ಕೂ ಸಂತೋಷ್ ರೆಸ್ಪಾನ್ಸ್ ಮಾಡದೆ ಇದ್ದಾಗ ರಿಸೆಪ್ಷನ್ ಗೆ ಓಡಿ ಹೋದೆವು. ರೂಮ್ ನಂಬರ್ 207 ರ ಗೆಳೆಯ ಎಲ್ಲಾದರೂ ಹೋಗಿದ್ದಾರಾ ಎಂದು ಕೇಳಿದೆವು. ಇಲ್ಲ. ಕೀ ಕೊಟ್ಟು ಹೋಗಿಲ್ಲ ಎಂದು ರಿಸೆಪ್ಷನಿಸ್ಟ್ ಹೇಳಿದ್ರು. ಇದರಿಂದ ಗಾಬರಿಗೊಂಡ ನಾವು ಮತ್ತೆ ಸಂತೋಷ್ ನಂಬರಿಗೆ ಫೋನ್ ಮಾಡಿದೆವು.

ಮತ್ತೆ ಕೊಠಡಿಯತ್ತ ಬಂದು ಬಾಗಿಲು ಬಡಿದ್ದೇವೆ. ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಮತ್ತೆ ರಿಸೆಪ್ಷನ್ ಗೆ ಬಂದು ಡುಬ್ಲಿಕೇಟ್ ಕೀ ಯಲ್ಲಿ ಓಪನ್ ಮಾಡುವಂತೆ ಕೇಳಿಕೊಂಡೆವು. ಡೂಪ್ಲಿಕೇಟ್ ಕೀ ಬಳಸಿ ಹೋಟೆಲ್ ಸಿಬ್ಬಂದಿಯೊಂದಿಗೆ 207 ಕೋಣೆಯ ಬಾಗಿಲನ್ನು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಗಿಲು ತೆಗೆದು ನೋಡಿದಾಗ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿದೆ.


Spread the love

About Laxminews 24x7

Check Also

‘ರಾಹುಲ್ ಗಾಂಧಿ, ಆತನ ಖಾಂದಾನ್ ಚೋರ್’: ಹರಿಯಾಣದಲ್ಲಿ ಮತಗಳ್ಳತನ ಆರೋಪಕ್ಕೆ ಛಲವಾದಿ ಟೀಕೆ

Spread the loveಚಾಮರಾಜನಗರ: “ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಕಾಂಗ್ರೆಸ್​ನವರು ಮಾತೆತ್ತಿದ್ರೆ ಗ್ಯಾರಂಟಿ ಎಂದು ದಿನ ದೂಡುತ್ತಿದ್ದಾರೆ” ಎಂದು ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ