ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದ ಆಚಾರಿಗಲ್ಲಿಯಲ್ಲಿ ವಯಸ್ಕರ ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ದಿನದ ಹಿಂದೆ ಆಚಾರಿಗಲ್ಲಿಯ ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆಯಿಂದ ದುರ್ವಾಸನೆ ಬಂದು,ಪ್ರಕರಣ ಇವತ್ತು ಬೆಳಕಿಗೆ ಬಂದಿದೆ.
61 ವರ್ಷ ವಯಸ್ಸಿನ ಯದುಕುಲೇಶ ನಾಯಿಕ,70 ವರ್ಷದ ಪಂಕಜಾ ರಾಮಚಂದ್ರ ನಾಯಿಕ,ಆತ್ಯಹತ್ಯೆ ಮಾಡಿಕೊಂಡಿದ್ದು,ಇಬ್ಬರೂ ಅವಿವಾಹಿತರಾಗಿದ್ದರು,ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.
ಆತ್ಮಹತ್ಯೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ,ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7