ಬೆಂಗಳೂರು : ಕನ್ನಡದ ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯ ಸ್ತಂಭನದಿಂದ ಬಳಲಿದ ನಂತರ ನಿಧನರಾಗಿದ್ದರು . ಅವರ ನಿಧನವು ಅವರ ಅನೇಕ ಅಭಿಮಾನಿಗಳಿಗೆ ಇಂದಿಗೂ ನಂಬಲಾಗದ ಸತ್ಯವಾಗಿದೆ . ಇನ್ನು , ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಬಳಿಕ ಅವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ . ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಟನಿಗೆ ಸಿಕ್ಕ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದರು .
ಇದೀಗ , ಪುನೀತ್ ಅವರ ಪುತ್ರಿ ವಂದಿತಾ ಅವರು ಒದುತ್ತಿರುವ ಸೋಫಿಯಾ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ ಮಾಡಲಾಗಿದೆ . ಅಂದಹಾಗೆ , ಪುನೀತ್ ಪುತ್ರಿ ವಂದಿತಾ ಅವರು ಸೋಫಿಯಾ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಒದುತ್ತಿದ್ದಾರೆ . ಇನ್ನು , ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸನ್ಮಾನ ಮಾಡಿದ ಕಾರ್ಯಕ್ರಮದಲ್ಲಿ ನಟ ಯುವ ರಾಜ್‌ಕುಮಾರ್ ಮತ್ತು ಮಂಗಳಮ್ಮ ಅವರು ಭಾಗಿಯಾಗಿದ್ದಾರೆ . ಇದಕ್ಕೆ ಸಂಬಂಧ ಪಟ್ಟ ಕೆಲ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ .