ಮದ್ಯಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ರಾಜ್ಯದ ಬಾರ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಖಾಲಿಯಾಗಿವೆ ಮದ್ಯಪಾನ.
ರಾಜ್ಯದ ಬಹುತೇಕ ಅಂಗಡಿಗೆ ಮದ್ಯ ಪೂರೈಕೆ ಆಗ್ತಿಲ್ಲ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ನಿನ್ನೆಯಿಂದಲೂ ರಾಜ್ಯ ಅಂಗಡಿಗಳಿಗೆ ಮದ್ಯಪಾನ ಪೂರೈಕೆ ಆಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಯಾಕಪ್ಪಾ ಎಣ್ಣೆ ಸಿಗ್ತಿಲ್ಲ ಅದು ಕೂಡ ದುಬಾರಿ ಆಗಿದ್ಯಾ ಅಂತ ಮದ್ಯಪ್ರಿಯರು ಗೊಣಗುತ್ತಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯಪಾನ ಖಾಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೂತನ ಸಾಫ್ಟ್ವೇರ್ ಅಪ್ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
KSBCLನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಬಾರ್ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದೆ. ಇಂದು ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಹೊಸ ಸಾಫ್ಟ್ ವೇರ್ ಅಪ್ಡೇಟ್ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಿನ್ನೆಯಿಂದಲೂ ಬಾರ್ಗಳಿಗೆ ಮದ್ಯಪಾನ ಸಪ್ಲೈ ಆಗಿಲ್ಲ. ಅಂಗಡಿಗಳಲ್ಲಿರುವ ಮದ್ಯಪಾನದ ಸ್ಟಾಕ್ನನ್ನೇ ಗ್ರಾಹಕರಿಗೆ ನೀಡ್ತಿದ್ದಾರೆ . (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ನಾಳೆಯೊಳಗೆ ರಾಜ್ಯದ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಮದ್ಯಪಾನ ಪೂರೈಕೆ ಆಗದಿದ್ರೆ ಗ್ರಾಹಕರು ಗಲಾಟೆಗಿಳಿಯೋ ಸಾಧ್ಯತೆ ಹೆಚ್ಚಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಮದ್ಯಪಾನ ಮಾರಾಟದಿಂದ ಬರೋ ಟ್ಯಾಕ್ಸ್ ಸರ್ಕಾರದ ಬಹುಮುಖ್ಯ ಆದಾಯದ ಮೂಲವಾಗಿದೆ. ಆದಷ್ಟು ಬೇಗ ರಾಜ್ಯದ ಬಾರ್ ಅಂಡ್ ರೆಸ್ಟೋರೆಂಟ್ಗೆ ಮದ್ಯಪಾನದ ಪೂರೈಕೆ ಆಗಬೇಕು. ಇಲ್ಲವಾದ್ರೆ ಗ್ರಾಹಕು ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಗಲಾಟೆ ಆಗೋದು ಗ್ಯಾರೆಂಟಿ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)