Breaking News

ಮನೆ ಕಳ್ಳತನಕ್ಕೆ ಬಂದ ಖತರ್ನಾಕ್​ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ

Spread the love

ಬೆಳಗಾವಿ: ಮನೆ ಕಳ್ಳತನಕ್ಕೆ ಬಂದ ಖತರ್ನಾಕ್​ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.  1 ವರ್ಷದ ಬಾಲಕಿಯನ್ನು, ಅನಿಲ್ ರಾಮು ಲಂಬೂಗೋಳ (31) ಎಂಬ ಖದೀಮ ಭಾನುವಾರ ತಡರಾತ್ರಿ ಅಪಹರಿಸಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡುವಾಗ ಮನೆಯವರ ಕಣ್ಣಿಗೆ ಬಿದ್ದಿದ್ದ ಅನಿಲ್ ರಾಮು, ಹೊರಗಡೆ ನಿಂತಿದ್ದ ಮಗುವನ್ನ ಅಪಹರಿಸಿದ್ದಾನೆ.

ಈ ಬಗ್ಗೆ ಪೋಷಕರು ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಮಾಡಿದ ಬಾಲಕಿ ಮತ್ತು ಆರೋಪಿ ಸದಲಗಾ ಪೋಲಿಸ್ ಠಾಣಾ ವ್ಯಾಪ್ತಿಯ ಕಾರದಗಾ ಗ್ರಾಮದಲ್ಲಿ ಪತ್ತೆಯಾಗಿದ್ದಾಳೆ. ಇನ್ನೂ ಸದಲಗಾ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಕರೆದು ತಂದು ವೈದ್ಯಕೀಯ ತಪಾಸಣೆಯನ್ನು ಮಾಡಲಾಗಿದೆ. ಸದ್ಯ ಬಾಲಕಿಯನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಆರೋಪಿಯ ಮೇಲೆ ಪೊಲೀಸ್​ ಕೇಸ್​ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ