Breaking News

ಖಾಸಗಿ ಬಸ್​ ತಡೆದು ಪರಿಶೀಲಿಸಿದ ಪೊಲೀಸರಿಗೆ ಪ್ರಯಾಣಿಕರ ಸೀಟಿನ ಅಡಿಯಲ್ಲಿ ಕಾದಿತ್ತು ಶಾಕ್​!

Spread the love

ವಿಜಯವಾಡ: ಯಾರಿಗೂ ತಿಳಿಯದಂತೆ ಖಾಸಗಿ ಬಸ್​ನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಲ್ಲಜರ್ಲ ವಲಯದ ವೀರವಳ್ಳಿಯಲ್ಲಿ ನಡದಿದೆ.

ಟೋಲ್​ ಪ್ಲಾಜಾದಲ್ಲಿ ಬಸ್​ ತಪಾಸಣೆ ಮಾಡುವಾಗ ಭಾರೀ ಮೊತ್ತದ ಹಣ ಪತ್ತಯಾಗಿದ್ದು, ಬಸ್​ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಶಕ್ಕೆ ಪಡೆಯಲಾದ ಮೊತ್ತು ಸುಮಾರು 5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಪೊಲೀಸರು ಟೋಲ್ ಪ್ಲಾಜಾದಲ್ಲಿ ಬಸ್ ಅನ್ನು ಪರಿಶೀಲಿಸಿದಾಗ ಬಸ್​ನಲ್ಲಿ ಲಗೇಜ್ ಕಂಪಾರ್ಟ್​ಮೆಂಟ್​ಗಳಲ್ಲಿ ಮತ್ತು ಸೀಟಿನ ಕೆಳಗೆ ನೋಟುಗಳ ಬಂಡಲ್​ಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು ಹಣ ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಇಷ್ಟೊಂದು ಮೊತ್ತದ ನಗದನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಹಲವು ಅನುಮಾನಗಳಿವೆ.

ಪ್ರಯಾಣಿಕರ ಆಸನಗಳ ಕೆಳಗೆ ಹಣವನ್ನು ಸಾಗಿಸುತ್ತಿದ್ದರಿಂದ ಇದು ಕಪ್ಪು ಹಣ ಎಂದು ಪೊಲೀಸರು ಶಂಕಿಸಿದ್ದಾರೆ. ಹಣ ವರ್ಗಾವಣೆ ವಿಚಾರ ಚಾಲಕ ಹಾಗೂ ಕ್ಲೀನರ್​ಗೆ ಗೊತ್ತಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಯಾವಾಗ ಮತ್ತು ಎಲ್ಲಿ ನಗದು ಜಮಾ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಲ್ಲಿಯೇ ಬಸ್ ಲೋಡ್ ಮಾಡಲಾಗಿದೆಯೇ ಅಥವಾ ನಡುರಸ್ತೆಯಲ್ಲಿ ಬಸ್​ನಲ್ಲಿ ಹಣ ಇಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 


Spread the love

About Laxminews 24x7

Check Also

ನಟ ವಿಷ್ಣುವರ್ಧನ್, ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ

Spread the loveಬೆಂಗಳೂರು: ನಟ ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ