Breaking News

ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್​ ಪಾಟೀಲ್‌ ಆರೋಪ

Spread the love

ಬೆಳಗಾವಿ : ಕಮೀಷನ್ ಆರೋಪದಿಂದ‌ ನುಣುಚಿಕೊಳ್ಳಲು ಸಚಿವ ಕೆ.ಎಸ್. ಈಶ್ವರಪ್ಪನವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಸಂತೋಷ್​ ಪಾಟೀಲ್‌ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಜೊತೆಗೆ ಬಿಜೆಪಿ ಮೆಂಬರ್‌ಶಿಪ್ ಕಾರ್ಡ್ ಸಹ ಬಿಡುಗಡೆ ಮಾಡಿದ್ದಾರೆ.

ಮುಂದೆ ಆಗುವ ಅನಾಹುತಕ್ಕೆ ಈಶ್ವರಪ್ಪನವರೇ ಹೊಣೆ : ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಪೂರ್ಣ ಮಾಡಿದ್ದೇನೆ. ವರ್ಕ್ ಆರ್ಡರ್, ಪೇಮೆಂಟ್ ಇಸ್ಯೂ ಮಾಡುವುದಾಗಿ ಹೇಳಿದ್ದಾಗಲೇ ಕಾಮಗಾರಿ ಮಾಡಿದ್ದೇನೆ. ಸುಮ್ಮನೇ ನುಣುಚಿಕೊಳ್ಳುವ ಸಲುವಾಗಿ ಅವನು ಯಾರು ಗೊತ್ತಿಲ್ಲ ಅಂತಿದ್ದಾರೆ. ಅವರ ಜೊತೆಗೆ ಇರುವ ಫೋಟೋಗಳೆನಲ್ಲ ಮಾಧ್ಯಮದವರಿಗೂ ಕೊಟ್ಟಿದ್ದೇನೆ.

108 ಕಾಮಗಾರಿ ಮಾಡಬೇಕಾದ್ರೆ ಯಾರಾದರೂ ಸುಮ್ಮನೀರ್ತಾರಾ ಸರ್? ಮೇಲಿಂದ ದೇವರು ಬಂದು ಕಾಮಗಾರಿ ಮಾಡೀರ್ತಾರಾ ಸರ್? ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಪಕ್ಷಕ್ಕೂ ಒಳ್ಳೆಯ ಹೆಸರು ಬಂದಿದೆ. ಆರೋಪದಿಂದ ಪಾರಾಗಬೇಕು ಎಂದು ಏನೇನೋ ಹೇಳಬೇಡಿ. ತಮ್ಮ ಹಿರಿತನಕ್ಕೆ ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ