ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಕೊಂಡೋತ್ಸವ ನಡೆಯುತ್ತಿದ್ದ ವೇಳೆ ಅವಘಡ ನಡೆದಿದೆ. ಕಟ್ಟಡ ಒಂದರ ಸಜ್ಜ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ.
ಪುಟ್ಟಲಿಂಗಮ್ಮ ಮೃತ ಮಹಿಳೆ. ಗ್ರಾಮದ ಬಸವೇಶ್ವರ ದೇವಾಲಯದ ಕೊಂಡೋತ್ಸವ ಇತ್ತು. ಈ ಕೊಂಡೋತ್ಸವ ನೋಡಲು ಹಳೆಯ ಕಟ್ಟಡದ ಮೇಲೆ ಜನರು ನಿಂತಿದ್ದರು. ಹಳೆ ಕಟ್ಟಡವಾದ್ದರಿಂದ ಮನೆಯ ಸಜ್ಜ ಕುಸಿದು ಮಹಿಳೆ ಸಾವನ್ನಪ್ಪಿದ್ದಾಳೆ. ದುರ್ಘಟನೆಯಲ್ಲಿ ಸುಮಾರು 30 ರಿಂದ 40 ಜನರಿಗೆ ಗಾಯವಾಗಿದೆ. ಗಾಯಳುಗಳಿಗೆ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.