ನವದೆಹಲಿ: ಧಾರವಾಡದ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40 ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಅವರು ಈ ವಿಶೇಷ ಮನ್ನಣೆ ಪಡೆದಿದ್ದಾರೆ.
ನಾನೊಬ್ಬ ಸಾಮಾನ್ಯ ರೈತ. ಆದರೆ, ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ನಾನು ನಡೆಸಿದ ಸಂಶೋಧನೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ ಹೇಳಿದರು.
‘ನಾನು ಇದನ್ನು ದೇಶದ ಎಲ್ಲಾ ರೈತರಿಗೆ ಅರ್ಪಿಸಲು ಬಯಸುತ್ತೇನೆ’ ಎಂದು ಅವರು ಹೇಳಿದರು.