ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿರುವ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್ ರೀಮಿಕ್ಸ್ ಹಾಡೇ ಕಣ್ಣು ಮುಂದೆ ಬರುತ್ತಿದೆ.
ಇನ್ನೂ ಕೂಡ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ, ಈ ಹಾಡಿಗೆ ಫಿದಾ ಆದ ಎಷ್ಟೋ ಮಂದಿ ಸೊಂಟ ಬಳಕಿಸುತ್ತಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿ ಇದೇ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಚ್ಚಾ ಬಾದಾಮ್ ಹಾಡಿಗೆ ಪೊಲೀಸ್ ಸಿಬ್ಬಂದಿ ಸ್ಟೆಪ್ ಹಾಕಿರುವ ವಿಡಿಯೋವನ್ನು ಮಾರ್ಚ್ 21ರಂದು @GoofyOlives ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಖಾಕಿ ಏಕೆ ಸ್ವಲ್ಪ ಮೋಜು ಮಾಡಬಾರದು ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೋದಲ್ಲಿ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಐವರು ಸಿಬ್ಬಂದಿ ಕಚ್ಚಾ ಬಾದಮ್ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದುವರೆಗೂ 500 ಕ್ಕೂ ಹೆಚ್ಚ ರೀಟ್ವೀಟ್ ಮತ್ತು 1 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 3 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.
Why shouldn’t khaki have some fun. Watch out on left and right most. pic.twitter.com/izKTzrq0Sm
— Da_Lying_Lama🇮🇳(Modi Ka Parivar) (@GoofyOlives) March 21, 2022
Laxmi News 24×7