ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ತಡೆಗೋಡೆ ಬಿರುಕು ಬಿಟ್ಟಿದೆ. ಯಾವುದೇ ಕ್ಷಣದಲ್ಲಾದರೂ ತಡೆಗೋಡೆ ಬೀಳುವ ಆತಂಕ, ಅಪಾಯ ಇದೆ. 10 ಕಿಲೋ ಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಫ್ಲೈಓರ್ ನ ಮಧ್ಯ ಭಾಗ ಲೇಬೈ ಬಳಿ ಬಿರುಕು ಬಿಟ್ಟಿದೆ.
ಕೆಲ ತಿಂಗಳ ಹಿಂದೆ ಇದೇ ಲೇಬೈ ಬಳಿ ಅಪಘಾತವಾಗಿತ್ತು. ಇತ್ತೀಚೆಗೆ ಅಪಘಾತದಲ್ಲಿ ತಡೆಗೋಡೆ ಬಿರುಕುಬಿಟ್ಟಿತ್ತು. ಆದರೆ ತಡೆಗೋಡೆ ದುರಸ್ತಿ ಮಾಡದೆ, ಬಿಇಪಿಟಿಎಲ್ ಸಂಸ್ಥೆ ಹಾಗೆಯೇ ಬಿಟ್ಟಿದೆ.
ಗೋಡೆ ಬದಲಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಅದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈ. ಲಿ ಸಿಬ್ಬಂದಿ ಬಿರುಕು ಬಿಟ್ಟಿರುವ ಜಾಗದಲ್ಲಿ ಬ್ಯಾರಿಕೇಡ್ ಇಟ್ಟು ಬಿಟ್ಟಿದ್ದಾರೆ ಅಷ್ಟೆ. ಗೋಡೆಯ ಕೊನೆಯ ಭಾಗ ಓಪನ್ ಆಗಿಯೇ ಬಿಟ್ಟಿದ್ದಾರೆ. ಇನ್ನು ತಡೆಗೋಡೆ ಬಿದ್ದರೆ ನೇರವಾಗಿ ವಾಹನ ಸವಾರರ ನೆತ್ತಿಯ ಮೇಲೆಯೇ ಬೀಳುವ ಆತಂಕ ಎದುರಾಗಿದೆ.ಬಿಇಪಿಟಿಎಲ್ ಸಂಸ್ಥೆ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.