ಕಾಂಗ್ರೆಸ್ ಲೋಫರ್ ಪಾರ್ಟಿ ಎಂದು ಕಾಂಗ್ರೆಸ್ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ವಿಜಯಪುರ ನಗರದ ತೊರವಿ ಎಲ್.ಟಿ ನಂ 4ರಲ್ಲಿ ಮಾದ್ಯಮಗಳಿಗೆ ಯತ್ನಾಳ್ ಈ ರೀತಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಲೋಫರ್ ಪಾರ್ಟಿ ಎಂದು ಇತ್ತಿಚೆಗೆ ಬಿಜೆಪಿಗೆ ಬ್ರೋಕರ್ ಪಾರ್ಟಿ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗೆ ಯತ್ನಾಳ್ ಟಾಂಗ್ ನೀಡಿದರು. ಬಿಜೆಪಿಗೆ ಬ್ರೋಕರ್ ಎಂದವರಿಗೆ ಕಾಂಗ್ರೆಸ್ ಲೋಫರ್ ಪಾರ್ಟಿ ಅನ್ನೋದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಂದುವರೆದು ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ ಡಿಕೆಶಿ ಜೊತೆಗಿದ್ದ ಹಿರಿಯ ರಾಜಕಾರಣಿ ಮೇಲೆ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಡಿಕೆಶಿಯ ಮೂಲ ಸಂಸ್ಕೃತಿ ತೋರಿಸುತ್ತೆ, ಇಂಥವ್ರು ಸಿಎಂ ಆದ್ರೆ ಏನಾಗುತ್ತೆ ಹೇಳಿ ಎಂದು ಯತ್ನಾಳ್ ಪ್ರಶ್ನಿಸಿದರು.
ಡಿಕೆಶಿಗೆ “ಆ ದಿನಗಳು ನೆನಪಾಗಿವೆ, ಆ ದಿನಗಳು ಖಾಯಂ ಆಗಿ ಇವೆ, ಜೈಲಿಗೆ ಹಾಕಿದಾಗ ಬಿಪಿ ಶುಗರ್ ಅಂದ್ರು, ಪಾದಯಾತ್ರೆ ಮಾಡೋವಾಗ ಶಕ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿ ಬೇಲ್ ತೆಗೆದುಕೊಳ್ಳುವಾಗ ಅತಿಯಾದ , ಶುಗರ್ ಎಂದಿದ್ದರು. ಯಾರಾದ್ರು ಪಿಟಿಷನ್ ಹಾಕಿದ್ರೆ ಮತ್ತೆ ಒಳಗೆ ಹೋಗ್ತಾರೆ, ಕೋರ್ಟನವರು ಯಾಕೋ ಸುಮ್ಮನಿದ್ದಾರೆ ಎಂದು ಹರಿಹಾಯ್ದರು.