Breaking News

ಹೈಕೋರ್ಟ್ ತೀರ್ಪಿಗೆ ತಲೆ ಬಾಗಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ

Spread the love

ಬೆಂಗಳೂರು: ಹಿಜಾಬ್ ಪ್ರಕರಣ ಸಂಬಂಧದ ಹೈಕೋರ್ಟ್ ನೀಡಿರುವ ತೀರ್ಪಿಗೆ ತಲೆ ಬಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋರ್ಟ್ ಏನು ಆದೇಶ ನೀಡಿದೆ ಎಂದು ಪೂರ್ಣವಾಗಿ ಗಮನಿಸಿಲ್ಲ. ಸದ್ಯ ನಾನು ಕೋರ್ಟ್ ಆದೇಶದ ಬಗ್ಗೆ ಕಾಮೆಂಟ್ ಮಾಡಲು ಹೋಗಲ್ಲ. ಹೈಕೋರ್ಟ್ ಏನು ಆದೇಶ ನೀಡಿದೆ ಎಂದು ಪೂರ್ಣವಾಗಿ ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.ತೀರ್ಪಿನಿಂದ ಕಾಂಗ್ರೆಸ್ ನಾಯಕರಿಗೆ ಕಪಾಳ ಮೋಕ್ಷ ಆಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಿಜಾಬ್ ನಿಂದ ಯಾರಿಗೂ ತೊಂದರೆ ಆಗಲ್ಲ ಅಂತಾ ಹೇಳಿದ್ದೆವು. ಮೊದಲಿನಿಂದಲೂ ಅವರು ಹಿಜಾಬ್​​ ಧರಿಸುತ್ತ ಬಂದಿದ್ದಾರೆ. ಇದರಿಂದಾಗಿ ಯಾರಿಗೂ ತೊಂದರೆ ಆಗಲ್ಲ ಎಂದು ಹೇಳಿದ್ದೆವು. ಇದರಿಂದ ಕಪಾಳ ಮೋಕ್ಷ ಎಲ್ಲಿಂದ ಆಗುತ್ತದೆ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ