Breaking News

ರಾಜ್ಯದಲ್ಲಿ BJP ಸರ್ಕಾರ ಬಂದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್: ಬಿ.ಶ್ರೀರಾಮುಲು

Spread the love

ಗದಗ: ದೇವರ ದಯದಿಂದ 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಅಡವಿಟ್ಟ ವಿಚಾರವಾಗಿ ಮಾತನಾಡಿದರು. ಇಲಾಖೆ ಆಸ್ತಿ ಅಡವಿಟ್ಟಿರುವುದು ನಿಜ. ಅಡವಿಟ್ಟ ಉದ್ದೇಶ ಸಿಬ್ಬಂದಿ ಭವಿಷ್ಯದ ನಿಧಿಗಾಗಿ. ಹೆಚ್ಚು ಬಡ್ಡಿ ಬರಿಸಬೇಕಾಗಿತ್ತು. ಅದನ್ನು ತಪ್ಪಿಸಲು ಕಡಿಮೆ ಬಡ್ಡಿದರ ದೊರೆಯುವ ಹಿನ್ನಲೆ, ಅಡಮಾನ ಇಡಲಾಗಿದೆ. ವೈಯಕ್ತಿಕವಾಗಿ ಇಲ್ಲಿ ಬಳಕೆ ಮಾಡುವದು ಏನೂ ಇಲ್ಲ. ಎಲ್ಲವೂ ಭವಿಷ್ಯದ ನಿಧಿ ಸಲುವಾಗಿ ಕೊಟ್ಟಿದ್ದು. ಸಾರಿಗೆ ಲಾಭದಾಯಕದ ಉದ್ದೇಶವಿಲ್ಲ, ಜನರ ಸೇವೆ ನೀಡುವ ಉದ್ದೇಶವಿದೆ. ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಗಿಫ್ಟ್ ನೀಡುವ ವಿಚಾರಕ್ಕೆ ವ್ಯಂಗ್ಯವಾಡಿದರು.ಸಿದ್ಧರಾಮಯ್ಯ ತಮ್ಮ ಸ್ವಕ್ಷೇತ್ರದಲ್ಲಿ ಹೊಸ ಸಂಪ್ರದಾಯ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿದವರಿಗೆ ಟಂಟಂ, ಬೈಕ್, ಟಿವಿ, ಪ್ರಿಜ್, ಮೊಬೈಲ್ ಹೀಗೆ ಅನೇಕ ವಸ್ತುಗಳನ್ನು ಕೊಡುತ್ತೆವೆ ಅಂತಿದ್ದಾರೆ.

ಕಾಂಗ್ರೆಸ್ ಈಗ ಎಂತಹ ದುಸ್ಥಿತಿಗೆ ಬಂದಿದೆ ನೋಡಿ. ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಮಿಷ ಒಡ್ಡುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಆದರೆ ನಾವು ಎಂಥಹ ಪರಿಸ್ಥಿತಿ ಬಂದರೂ ರಾಜಿಯಾಗೋ ಪ್ರಶ್ನೆ ಇಲ್ಲ. ಸಿದ್ಧರಾಮಯ್ಯ ಹಾಗೂ ಡಿಕೆಶಿ ಕೇವಲ ರಾಜಕಾರಣಕ್ಕೆ  ಫೋಟೋ ಪೋಸ್‍ಗಾಗಿ ಇಬ್ಬರು ಜೊತೆಯಾಗಿರ್ತಾರೆ. ಇಬ್ಬರೂ ನಾನು ಸಿಎಂ ಆಗಬೇಕು ನಾನು ಸಿ.ಎಂ ಆಗಬೇಕು ಎಂದು ಪೈಪೋಟಿ ಜೊತೆ ಹಗಲು ಕಸನು ಕಾಣುತ್ತಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ