ಗುಟ್ಕಾ ತಿನ್ನುವಾಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಗೆ ಗುಟ್ಕಾದಲ್ಲಿದ್ದ ವೀಳ್ಯದೆಲೆ ಗಂಟಲಿಗೆ ಸಿಲುಕಿರುವುದು ಕಾರಣ ಎಂದು ತಿಳಿದುಬಂದಿದೆ.
ಔರಂಗಾಬಾದ್(ಮಹಾರಾಷ್ಟ್ರ): ಇಲ್ಲಿನರೈಲ್ವೆ ನಿಲ್ದಾಣದ ನಿವಾಸಿ ಗಣೇಶ್ ಜಗನ್ನಾಥದಾಸ್ ವಾಘ್ (37) ಎಂಬುವರು ಕಳೆದ 20 ವರ್ಷಗಳಿಂದ ರಾಹುಲ್ ಸಾಹುಜಿ ಬಳಿ ಕೆಲಸ ಮಾಡುತ್ತಿದ್ದರು.
ಗುರುವಾರ ಸಂಜೆ ಗುಟ್ಕಾ ತಿನ್ನುತ್ತಲೇ ಸಾವನ್ನಪ್ಪಿದ್ದಾರೆ.
ಹಠಾತ್ ಸಾವು ಹಿನ್ನೆಲೆ ಉಸ್ಮಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಟ್ಕಾ ತಿನ್ನುವಾಗ ಕೆಮ್ಮು ಬಂದಿದ್ದು, ಗಂಟಲಲ್ಲಿ ವೀಳ್ಯದೆಲೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.