ಬೆಳಗಾವಿ ನಗರದಲ್ಲಿ ಸರಕಾರಿ ನಿಯಮದ ಪ್ರಕಾರ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು. ಯಾರೂ ಕೂಡ ಡಾಲ್ಬಿಯನ್ನು ಬಳಸದಂತೆ ಸೌಹಾರ್ದ ರೀತಿಯನ್ನು ಹೋಳಿ ಆಚರಿಸಬೇಕೆಂದು ಮಾರ್ಕೆಟ್ ಸರ್ಕಲ್ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ್ ತುಳಸೀಗೇರಿ ಹೇಳಿದರು.
ಬೆಳಗಾವಿಯಲ್ಲಿ ಮಾರ್ಕೆಟ್ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಜೊತೆ ಹೋಳಿ ಹಬ್ಬ ಆಚರಣೆ ಕುರಿತಂತೆ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾರ್ಕೆಟ್ ಸಿಪಿಐ ಮಲ್ಲಿಕಾರ್ಜುನ್ ತುಳಸೀಗೇರಿ ಮಾತನಾಡಿ, ಬೆಳಗಾವಿಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಶಾಂತ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು. ಈ ಬಾರಿ ಹೋಳಿಯಲ್ಲಿ ಕೊವಿಡ್ ನಿಯಮಗಳು ಜಾರಿಯಲ್ಲಿರುತ್ತವೆ. ನಗರದಲ್ಲಿ ಡಾಲ್ಬಿಗಳನ್ನು ಹಚ್ಚಿ ಅನ್ಯ ಧರ್ಮೀಯರಿಗೆ ತೊಂದರೆ ನೀಡದೇ ಖುಷಿಯಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು. ನಗರದಲ್ಲಿ ಹೋಳಿ ಹಿನ್ನೆಲೆ ಸಾಕಷ್ಟು ಪೊಲೀಸ್ ಬಂದೋಬಸ್ತ ಮಾಡಲಾಗಿರುತ್ತದೆ. ನಿಯಮ ಮೀರುವ ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಕೆ ನೀಡಿದರು.
ಈ ಸಂದರ್ಭದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್‍ಐ ವಿಠ್ಠಲ ಹಾವನೂರ, ಸಿಬ್ಬಂದಿ ಹಾಗೂ ಸಾರ್ವಜನಿಕರೂ ಕೂಡ ಉಪಸ್ಥಿತರಿದ್ದರು.