ಗದಗ: ನಗರದ ಲಾಯನ್ ಸ್ಕೂಲ್ ಪ್ಲೆಗ್ರೌಂಡ್‍ಗೆ ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು, ಪತಿ ಪ್ಲೆಗ್ರೌಂಡ್‍ನಲ್ಲೇ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅಪೂರ್ವ ಹಲ್ಲೆಗೊಳಗಾದ ಮಹಿಳೆ. ಆರೋಪಿ ಇಜಾಜ್ ಹುಬ್ಬಳ್ಳಿ ಕೌಲಬಜಾರ್ನ ನಿವಾಸಿಯಾಗಿದ್ದಾನೆ. ಸ್ಕೂಟಿ ಕಲೆಯಲು ಹೋದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.
ಮದ್ವೆ ಆದ ಆರಂಭದಲ್ಲಿ ಇಬ್ಬರು ಚೆನ್ನಾಗಿದ್ದರು. ಇಜಾಜ್‍ಗೆ ಇದು 2ನೇ ಮದ್ವೆಯಾಗಿತ್ತು. ಇಜಾಜ್ ಮೊದಲ ಹೆಂಡತಿಗೆ ಮೂರು ಮಕ್ಕಳು. ಮೊದಲ ಹೆಂಡತಿ ವಿಚಾರ ಇಜಾಜ್ ಅಪೂರ್ವಳ ಮುಂದೆ ಗುಟ್ಟಾಗೇ ಇಟ್ಟಿದ್ದ. ಅದ್ಯಾವಾಗ ಅಪೂರ್ವಳಿಗೆ ಗಂಡನ ಅಸಲಿಯತ್ತು ಗೋತ್ತಾಯ್ತೊ, ಆಗಿನಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ವಿಚಾರವಾಗಿ ಬೇಸತ್ತು ತವರು ಮನೆ ಸೇರಿದ್ದ ಅಪೂರ್ವ, ವಿಚ್ಚೇದನಕ್ಕೆ ಅಪ್ಲೈ ಮಾಡಿದ್ದಳು. ಇದೇ ಕಾರಣಕ್ಕೆ ಇಜಾಜ್ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಮುಗಿಸೋ ಪ್ಲಾನ್ ಮಾಡಿದ್ದ. ಸ್ಕೂಟಿ ಕಲಿಯಲೆಂದು ಪ್ಲೇ ಗ್ರೌಂಡ್‍ಗೆ ಹೋದ ವೇಳೆ ಹಲ್ಲೆ ಮಾಡಿದ್ದಾನೆ.