ಬೆಂಗಳೂರು: ಯುವತಿ ಜೊತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಕ್ಯಾಬ್ನಿಂದ ಇಳಿಯುವಾಗ ಯುವತಿ ಚಾಲಕನ ಸಹಾಯ ಕೇಳಿದ್ದಳಂತೆ. ಈ ವೇಳೆ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಆಕೆ ನೀಡಿದ ದೂರಿನ ಮೇರೆಗೆ ರಾತ್ರೋರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.