ಮಾರ್ಚ್ 7 ರಂದು ರಾಯಚೂರು ನಗರ ಸಂಪೂರ್ಣವಾಗಿ ಬಂದ್ ಆಗಿಲಿದೆ.ರಾಯಚೂರು ನಗರದಲ್ಲಿರೊ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಧೋರಣೆ ಖಂಡಿಸಿ, ಬಂದ್ಗೆ ಕರೆ ನೀಡಲಾಗಿದೆ. ರಾಯಚೂರು ನಗರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಬಂದ್ ನಡೆಯಲಿದೆ. ರಾಯಚೂರು ಬಂದ್ ಗೆ ಬಹುತೇಕ ಎಲ್ಲಾ ಕ್ಷೇತ್ರದವರು ಬೆಂಬಲ ನೀಡಿದ್ದಾರೆ. ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೂಡ ಬಂದ್ನಲ್ಲಿ ಭಾಗಿಯಾಗಲಿದ್ದಾರೆ ಅಂತ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಬಂದ್ಗೆ ಕರೆ ನೀಡೊರೋದಕ್ಕೆ ಕಾರಣ ರಾಯಚೂರು ನಗರದಲ್ಲಿರೊ ನವೋದಯ ಮೆಡಿಕಲ್ ಕಾಲೇಜು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ರೂ, ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮಾತ್ರ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡ್ತಿರೊ ಆರೋಪ ಕೇಳಿಬಂದಿದೆ. ಮೆಡಿಕಲ್ ಓದ್ಬೇಕು ಅನ್ನೊ ಮಹದಾಸೆ ಹೊಂದಿರೊ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮಹಾನ್ ಅನ್ಯಾಯ ಮಾಡಲಾಗ್ತಿದೆ ಅಂತ ಹೋರಾಟಗಾರರು ಆರೋಪಿಸಿದ್ದಾರೆ. ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಧೋರಣೆಯಿಂದ ಈ ಸಾಲಿನ ಸುಮಾರು 106 ವಿದ್ಯಾರ್ಥಿಗಳು ಭವಿಷ್ಯ ಅತಂತ್ರದಲ್ಲಿದೆ ಅನ್ನೋದು ಹೋರಾಟಗಾರರ ಆರೋಪ