ಉತ್ತರಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ಧಾರೂಢರ ಮಹಾರಥೋತ್ಸವವು ಬುಧವಾರ ಸಂಜೆ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿ, ಸಡಗರ, ಸಂಭ್ರಮದಿಂದ ನಡೆಯಿತು.
ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಈ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸಿದರು. ಸಿದ್ಧಾರೂಢರ ಮಹಾರಥೋತ್ಸಕ್ಕೆ ಉತತ್ತಿ, ಬಾಳೆ, ಬೇಡಿದ ವರ್ ಸಿದ್ದಿಯಾಗಲಿ ಎಂದು ಬೇಡಿಕೊಂಡು ಎಸೆದರು.
ಮಹಾರಥೋತ್ಸವದಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದಲೂ ಭಕ್ತಸಾಗರವೇ ಜಾತ್ರೆಗೆ ಹರಿದುಬಂದಿತ್ತು.
Laxmi News 24×7