ಅಣ್ಣನಿಂದ ತಮ್ಮನ ಕೊಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಕುದುರಗುಂಡ ಗ್ರಾಮದಲ್ಲಿ ನಡೆದಿದೆ.
ಸಾಹೇಬಗೌಡ ಚನ್ನಬಸಪ್ಪಗೌಡ ಹದಗಲ್ಲ (27)ಮೃತ ದುರ್ದೈವಿಯಾಗಿದ್ದು ಈತನಿಗೆ ಎರಡು ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ನಿಂಗನಗೌಡ ಚನ್ನಬಸಪ್ಪಗೌಡ ಹದಗಲ್ಲ ತಮ್ಮನನ್ನು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಿಂದ ಹೊಡೆದು ಪರಾರಿಯಾದ ಘಟನೆ ಗ್ರಾಮದಲ್ಲಿ ನಡೆದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಲಕೇರಿ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.