ರಷ್ಯಾ: ದಿನೇ ದಿನೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಾರಕಕ್ಕೇರುತ್ತಿದೆ. ಇಂದು 7ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧದ ನಡುವೆಯೂ 3ನೇ ಮಹಾಯುದ್ಧ ಫಿಕ್ಸ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೂರನೇ ಮಹಾಯುದ್ಧ ನಡೆದ್ರೇ, ಪರಮಾಣು ಬಾಂಬ್ ಸ್ಪೋಟ ಕೂಡ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಈ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್ ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಮೂರನೇ ಮಹಾಯುದ್ಧ ನಡೆದರೆ, ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಮತ್ತೊಂದೆಡೆ, ರಷ್ಯಾ ದಾಳಿಯಿಂದ ಉಕ್ರೇನ್ ಅಕ್ಷರ ಶಹ ನಲುಗಿ ಹೋಗಿದೆ. 7ನೇ ದಿನಕ್ಕೆ ಉಕ್ರೇನ್-ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಈ ನಡುವೆ 6ನೇ ದಿನದ ಯುದ್ಧದ ಸಂದರ್ಭದಲ್ಲಿ ರಷ್ಯಾದ 6 ಸಾವಿರ ಯೋಧರನ್ನು ಹತ್ಯೆಗೈದಿರೋದಾಗಿ ಉಕ್ರೇನ್ ಅಧ್ಯಕ್ಷರು ( Ukraine’s President Volodymyr Zelenskyy ) ಮಾಹಿತಿ ನೀಡಿದ್ದಾರೆ.
Laxmi News 24×7