ಬೆಂಗಳೂರು: ನಾವೂ ಪಾರ್ಟಿಗಳಿಗೆ ಹೋಗುತ್ತೇವೆ ಆದರೆ ಡ್ರಗ್ಸ್ ದಂಧೆ ಎಲ್ಲ ನನಗೆ ಗೊತ್ತಿಲ್ಲ ಎಂದು ನಟ ಉಪೇಂದ್ರ ತಿಳಿಸಿದ್ದಾರ
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಎಂದು ಗೊತ್ತಿಲ್ಲ. ಆ ಪ್ರಪಂಚವೇ ನಮಗೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ಕೇಳಿ ದಿಗ್ಬ್ರಮೆಯಾಯಿತು. ಸರಿಯಾಗಿ ಮಾಹಿತಿ ಸಿಗುವವರೆಗೂ ಮಾತನಾಡೋದು ಸರಿಯಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನಾವೂ ಸಹ ಹಲವು ಪಾರ್ಟಿಗಳಿಗೆ ಹೋಗಿದ್ದೇವೆ. ಆದರೆ ಯಾರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ ಎಂದರು.
ಪಾರ್ಟಿಗಳಲ್ಲಿ ಡ್ರಗ್ಸ್ ಹೇಗೆ ತಗೋತ್ತಾರೆ ಅನ್ನೋದು ನಮಗೆ ಗೊತ್ತೇ ಇಲ್ಲ. ನಾನು ಯಾವತ್ತೂ ನೋಡಿಲ್ಲ. ಸರಿಯಾದ ಮೂಲಗಳಿಂದ ಮಾಹಿತಿ ಬಂದ ಮೇಲೆ ಗೊತ್ತಾಗುತ್ತೆ. ನನಗೆ ಇದರ ಬಗ್ಗೆ ಸತ್ಯವಾಗಿ ಏನು ಗೊತ್ತಿಲ್ಲ, ಏನನ್ನೂ ನೋಡಿಲ್ಲ. ಯಾರು ಆರೋಪ ಮಾಡುತ್ತಿದ್ದಾರೆ ಅವರನ್ನೇ ಕೇಳಬೇಕು. ಇಂಡಸ್ಟ್ರಿಯಲ್ಲಿ ಇವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೂ ನನಗೆ ಆಶ್ಚರ್ಯವಾಗುತ್ತೆ. ಯಾವುದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಯುವ ಜನತೆಯಲ್ಲಿ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಯುವ ಜನತೆ ಇದರಿಂದ ದೂರ ಇರಿ. ನಶೆಯ ಗುಂಗು ಶಾಶ್ವತ ಅಲ್ಲ, ಯುವಕರು ಇಂತಹ ವಿಷಯಕ್ಕೆ ಕೈ ಹಾಕಬೇಡಿ. ಇದನ್ನು ಸೇವಿಸುವವರು ಸಹ ಇದರಿಂದ ಹೊರಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.