ಚೆನ್ನೈ: ಐಪಿಎಲ್ 2022ಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿಯ ಹೊಸ ಮೀಸೆ ನೋಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಧೋನಿಯ ಈ ಹೊಸ ಲುಕ್‍ಗೆ ‘ತಲೈವರ್ ಸೂಪರ್ ಸ್ಟಾರ್’ ನಂತೆ ಕಾಣುತ್ತೀರಾ ಎಂದು ಬರೆದುಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರು ತಮ್ಮ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯಗಳಿಂದಲೇ ಹೆಸರುವಾಸಿಯಾದವರು. ಆದರೆ ಅವರು ಪ್ರತೀ ಐಪಿಎಲ್ ಸೀಸನ್‍ಗಳ ಜಾಹೀರಾತಿನಲ್ಲಿ ವಿಭಿನ್ನ ರೀತಿಯ ಗೆಟಪ್‍ಗಳನ್ನು ಧರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಈ ಗೆಟಪ್‍ಗಳಿಗೆ ಅಭಿಮಾನಿಗಳು ಸಹ ಹೆಚ್ಚಾಗಿ ಪ್ರಶಂಸುತ್ತಿರುತ್ತಾರೆ.ಧೋನಿಯವರು ಮುಂಬರುವ ಐಪಿಎಲ್ 2022ರ ಪ್ರೋಮೋಗಳ ಟೀಸರ್‌ಗಳಲ್ಲಿ ಒಂದಕ್ಕೆ ಅವರು ಮತ್ತೊಂದು ಹೊಸ ನೋಟವನ್ನು ಪ್ರದರ್ಶಿಸಿಸುತ್ತಿದ್ದಾರೆ. ಅವರ ಈ ಹೊಸ ಅವತಾರದಲ್ಲಿ ಮೀಸೆಯನ್ನು ಬಿಟ್ಟು ಬಹುತೇಕ ಗುರುತಿಸಲಾಗದಂತೆ ಕಾಣುತ್ತಿದ್ದಾರೆ.
Laxmi News 24×7