ವಾಹನಗಳ ನೋಂದಣಿ ನಾಮಫಲಕಗಳ ಮೇಲೆ ನಿಯಮ ಬಾಹಿರವಾಗಿ ಸಂಘ ಸಂಸ್ಥೆಗಳು ಅದರ ಚಿಹ್ನೆ ಮತ್ತು ಲಾಂಛನ ಇತರೆ ಹೆಸರುಗಳನ್ನು ಅಳವಡಿಸಿದ್ರೆ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆಳಗಾವಿ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ನೋಂದಣಿ ನಾಮಫಲಕಗಳ ಮೇಲೆ ನಿಯಮ ಬಾಹಿರವಾಗಿ ಪ್ರದರ್ಶನ ಮಾಡುತ್ತಿರುವ ಸಂಘ ಸಂಸ್ಥೆಗಳು ಅದರ ಚಿಹ್ನೆ ಮತ್ತು ಲಾಂಛನ ಇತರೆ ಹೆಸರುಗಳನ್ನು ತೆರೆಸಿಕೊಳ್ಳಲು ಉಚ್ಛ ನ್ಯಾಯಾಲಯದ ಆದೇಶವನ್ನು ಸಾರಿಗೆ ಇಲಾಖೆಯಿಂದ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಯಾರಾದ್ರೂ ಸಂಘ, ಸಂಸ್ಥೆಗಳು, ಬಿಬಿಎಂಪಿ, ಬಿಡಿಎ, ಕೆಎಚ್‍ಪಿ, ಕೆಎಚ್‍ಎಫ್‍ಸಿ, ಎಂಎಸ್‍ಐಎಲ್, ಕೆಪಿಟಿಸಿಎಲ್, ಬೆಸ್ಕಾಂ ಸೇರಿದಂತೆ ಯಾರಾದ್ರೂ ನೋಂದಣಿ ಫಲಕದ ಜೊತೆಗೆ ನಾಮಫಲಕವನ್ನು ಹಾಕಿದ್ದರೆ ತಕ್ಷಣವೇ ತೆರವು ಮಾಡಬೇಕು. ಒಂದು ವೇಳೆ ತೆರವುಗೊಳಿಸದಿದ್ರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.