Breaking News

ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ

Spread the love

ಬೀದರ್: ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲ್ಫಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಪೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್​ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಸೇಫಾಗಿರಿ ಎಂದು ಭಾರತ ಸರ್ಕಾರ ಹೇಳಿದೆ ಎಂದು ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದಾರೆ. 


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ