ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಟೋ ಚಾಲಕರಿಗೆ (Auto Driver) ಸರ್ಕಾರ ಶಾಕ್ ಕೊಡೋಕೆ ಸಿದ್ಧವಾಗಿದೆ.
ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಹೆಸರಿನಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು 2stroke ಆಟೋಗಳ ಬ್ಯಾನ್ ಗೆ ಮುಂದಾಗಿದೆ.
ಏಪ್ರಿಲ್ 1 ರಿಂದ ಅಂತಹ ಆಟೋಗಳು ನಗರದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ ಎಂದಿರುವ ಸರ್ಕಾರದ ವಿರುದ್ಧ ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.
ಕೊರೊನಾ ಕರ್ಫ್ಯೂ (Corona Curfew) ಹಾಗೂ ಲಾಕ್ ಡೌನ್ ನಿಂದ ಬಸವಳಿದಿದ್ದ ಆಟೋ ಚಾಲಕರನ್ನು ಈ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ವಾಯುಮಾಲಿನ್ಯ ನಿಯಂತ್ರಣ ನೆಪದಲ್ಲಿ ಸರ್ಕಾರ ಮಾಡಿದ ಈ ನಿಯಮ ಚಾಲಕರಿಗೆ ಬರೆ ಎಳೆದಂತಾಗಿದೆ.
ಮಾರ್ಚ್ 31ಕ್ಕೆ 2stroke ಆಟೋಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿರ್ಧಾರದಿಂದ ಆಟೋ ಚಾಲಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ. ಹೆಚ್ಚು ಹೊಗೆ ಉಗುಳುವ ಕಾರಣ 2 ಸ್ಟ್ರೋಕ್ ಆಟೋ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.