Breaking News

ಫೆ.27ರಂದು ಭಾರತ ವಿಕಾಸ್ ಪರಿಷತ್ ಬೆಳಗಾವಿ ಶಾಖೆಯ ರಜತ ಮಹೋತ್ಸವ: ಡಾ.ಜೆ.ಜಿ.ನಾಯಿಕ್

Spread the love

ಭಾರತ ವಿಕಾಸ್ ಪರಿಷತ್ ಬೆಳಗಾವಿ ಶಾಖೆಯ 25 ವರ್ಷಗಳ ರಜತ ಮಹೋತ್ಸವ ಕಾರ್ಯಕ್ರಮ ಇದೇ ಫೆ.27ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿರುವ ಗ್ಯಾಲಕ್ಸಿ ಹಾಲನ್‍ಲ್ಲಿ ಆಯೋಜಿಸಲಾಗಿದೆ ಎಂದು ಡಾ.ಜೆ.ಜಿ.ನಾಯಿಕ್ ತಿಳಿಸಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜೆ.ಜಿ.ನಾಯಿಕ್ ಫೆ.27ರಂದು ಬೆಳಿಗ್ಗೆ 8.30ರಿಂದ ಸಾಯಂಕಾಲ 8.30ರವರೆಗೆ ಭಾರತ ವಿಕಾಸ್ ಪರಿಷತ್‍ನ ರಜತ ಮಹೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದೇವೆ.

ಭಾರತ ವಿಕಾಸ್ ಪರಿಷತ್ ನಡೆದು ಬಂದ ದಾರಿ 25 ವರ್ಷಗಳಲ್ಲಿ ನಾವು ಮಾಡಿರುವ ಕಾರ್ಯಗಳ ಕುರಿತು ಬೆಳಿಗ್ಗೆ ಒಂದು ಗಂಟೆ ಪ್ರೆಜೆಂಟೇಶನ್ ಮಾಡುತ್ತಿದ್ದೇವೆ. ಸಾಯಂಕಾಲ 5 ಗಂಟೆಗೆ ಜವಾಬ್ದಾರಿಯನ್ನು ಮನಸಾರೆ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ನೂತನ ಪದಾಧಿಕಾರಿಗಳ ಪದಗ್ರಹಣ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದಾನಿಗಳಿಗೆ ಸತ್ಕಾರ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ