Breaking News

ಬಿತ್ತನೆ ಮಾಡದೇ ಬಿಟ್ಟಿದ್ದ ಜಾಗದಲ್ಲಿ ಅಶ್ವಗಂಧ – ಸಂತಸದಲ್ಲಿ ಕೊಪ್ಪಳ ರೈತರು

Spread the love

ಕೊಪ್ಪಳ: ಜಿಲ್ಲೆಯ ಜಿಂಕೆ (Deer) ಹಾವಳಿಗೆ ಬೇಸತ್ತು, ತಮ್ಮ ಜಮೀನುಗಳನ್ನ ಬಿತ್ತನೆ ಮಾಡದೇ ಬಿಟ್ಟಿದ್ದ ರೈತರಿಗೆ (Farmers) ಔಷಧಿಯ (Medicine) ಸಸ್ಯ ಅಶ್ವಗಂಧ ವರದಾನವಾಗಿದೆ. ಕೊಪ್ಪಳ ತಾಲೂಕು ಅಳವಂಡಿ ಗ್ರಾಮದ ರೈತ ಭೀಮರಡ್ಡೆಪ್ಪ ಗದ್ದಿಕೇರಿ ಅಶ್ವಗಂಧ ಬೆಳೆದು ಇತರೇ ರೈತರಿಗೆ ಮಾದರಿ ಆಗಿದ್ದಾರೆ.

ಭೀಮರೆಡ್ಡೆಪ್ಪ ಅವರು ತಮ್ಮ ಒಟ್ಟೂ 7 ಎಕರೆ ಹೊಲದಲ್ಲಿ ಮಳೆಯಾಶ್ರಿತ ಕೃಷಿಯಲ್ಲೇ ಅಶ್ವಗಂಧ ಬೆಳೆದಿದ್ದಾರೆ. ಖಾಸಗಿ ಕಂಪನಿಯೊಂದಿಗೆ ಖರೀದಿ ಒಪ್ಪಂದ ಮಾಡಿಕೊಂಡು ಅಶ್ವಗಂಧ ಬಿತ್ತನೆ ಮಾಡಿದ್ದಾರೆ. ಬೀಜವನ್ನೂ ಕೊಡುವ ಕಂಪನಿ ಅಶ್ವಗಂಧ ಸಸ್ಯವನ್ನು 2 ಭಾಗವಾಗಿ ಖರೀದಿ ಮಾಡುವ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆಯುತ್ತಾರೆ.

ಕಂಪನಿಯೇ ಮರು ಖರೀದಿ ಮಾಡುತ್ತದೆ

ಸಸ್ಯದ ‌ಬೇರು ಸಹಿತ ಭೂಮಿ ಒಳಗಿನ ಕಾಂಡ ಮತ್ತು ಭೂಮಿ ಮೇಲಿನ ಸಸ್ಯದ ಇತರೇ ಭಾಗವನ್ನು ಎರಡು ಹಂತದಲ್ಲಿ ಮರು ಖರೀದಿ ಮಾಡುತ್ತಾರೆ.ಒಟ್ಟೂ 7 ಎಕರೆಗೆ 50 ಕೆಜಿ ಬೀಜ ಬಿತ್ತನೆ ಮಾಡಿ, ಸುಮಾರು 14 ಕ್ವಿಂಟಾಲ್ ಕಾಂಡ ಮತ್ತು 14 ಕ್ವಿಂಟಾಲ್ ಸಸ್ಯದ ಮೇಲಿನ ಭಾಗ‌ದ ಫಸಲು ಬರುವ ನಿರೀಕ್ಷೆ ‌ಇದೆ. ಕಾಂಡವನ್ನು ಸುಮಾರು 21 ರಿಂದ 25 ಸಾವಿರಕ್ಕೆ ಕ್ವಿಂಟಾಲ್ ಮತ್ತು ಸಸ್ಯದ ಮೇಲಿನ ಫಸಲನ್ನು ಪ್ರತಿ ಕ್ವಿಂಟಾಲಿಗೆ 3 ರಿಂದ 4 ಸಾವಿರಕ್ಕೆ ಬೀಜ ಕೊಟ್ಟಿರುವ ಕಂಪನಿಯೇ ಮರು ಖರೀದಿ ಮಾಡುತ್ತದೆ.

ಕುಬ್ಜ ವರ, ಎತ್ತರದ ವಧು ಅಪರೂಪದ ಮದುವೆಗೆ ಸಾಕ್ಷಿಯಾದ ಬಾದಾಮಿಯ ನೀಲಗುಂದ ಗ್ರಾಮ

ಸುಮಾರು 2 ಲಕ್ಷ ರೂ.ಲಾಭದ ನಿರೀಕ್ಷೆಯಲ್ಲಿದ್ದಾರೆ. ಔಷಧೀಯ ಸಸ್ಯ ಅಶ್ವಗಂಧ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದಿಲ್ಲ. ಜೊತೆಗೆ ಕೀಟನಾಶಕ ಕೂಡ ಸ್ಪ್ರೇ ಮಾಡುವಂತಿಲ್ಲ. ಬಿತ್ತನೆ ಮಾಡಿದ ನಂತರ ಒಂದಷ್ಟು ಕಳೆ ತೆಗೆಸುವುದು ಮತ್ತು ಕಟಾವು ಮಾಡುವ ಕೆಲಸಕ್ಕೆ ಖರ್ಚು ಮಾಡಬೇಕು. ಬಿತ್ತನೆ ಮಾಡಿದ ನಂತರ ಮಳೆಯಾಗದಿದ್ದರೂ ಮಳೆ ಬಂದಾಗ ಬೀಜ ಮೊಳಕೆಯೊಡೆಯುವ ವಿಶೇಷತೆ ಈ ಸಸ್ಯಕ್ಕೆ ಇರೋದು ವಿಶೇಷ.

ಗದಗ ಜಿಲ್ಲೆಯ ಗಡಿ ಭಾಗದ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳ ವ್ಯಾಪ್ತಿಯ ಜಮೀನಿನಲ್ಲಿ ಜಿಂಕೆ ಹಾವಳಿ ಹೇಳ ತೀರದಂತಿದೆ. ಈ ಭಾಗದ ಹೊಲಗಳಿಗೆ ಪ್ರತಿ ದಿನ ಲಗ್ಗೆ ಇಡುವ ನೂರಾರು ಜಿಂಕೆಗಳು, ಬಿಳಿಜೋಳ, ತೊಗರಿ, ಉಳಿಕಡಲೆ ಸೇರೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆಯಂತೆ. ಈ ಕಾರಣಕ್ಕೆ ಅಳವಂಡಿ, ಕವಲೂರು, ಬೆಟಗೇರಿ,‌ ತಿಗರಿ,‌ ಬೋಚನಹಳ್ಳಿ ಸೇರಿ ಹತ್ತಾರು ಗ್ರಾಮದ ಸಾವಿರಾರು ಎಕರೆ ಜಮೀನನ್ನು ಬಿತ್ತನೆ ಮಾಡದೇ ಬಿಟ್ಟಿದ್ದಾರೆ.‌

ಇನ್ನು ಸದ್ಯ ಅಶ್ವಗಂಧ ಬೆಳೆದಿರೋ ಭೀಮರೆಡ್ಡಪ್ಪ ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ 7 ಎಕರೆ ಭೂಮಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ, ಬೆಳೆದಿದ್ದ ಜೋಳ ಸಾಕಷ್ಟು ಬಾರಿ ಜಿಂಕೆಗಳ ಪಾಲಾಗಿದೆಯಂತೆ. ಬಿತ್ತನೆ ಮತ್ತು ಬೀಜದ ‌ಖರ್ಚು ವಾಪಾಸ್ ಪಡೆಯಲು ಆಗಿಲ್ಲವಂತೆ. ಈ ಕಾರಣಕ್ಕೆ ಇವರು ಔಷಧಿಯ ಸಸ್ಯ ಅಶ್ವಗಂಧದ ಮೊರೆ ಹೋಗಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ