Breaking News

ಬಿಯರ್ ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ

Spread the love

ಮುಂಬೈ: ರಷ್ಯಾ-ಉಕ್ರೇನ್‍ನ ಸಂಭವನೀಯ ಯುದ್ಧದಿಂದ ಬಿಯರ್ ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಬೇಸಿಗೆ ಕಾಲ ಪ್ರಾರಂಭವಾದಂತೆ ರಷ್ಯಾ-ಉಕ್ರೇನ್ ಗಡಿಯಲ್ಲಿ ಕಲಹ ಎದುರಾಗಿದ್ದು, ಇದರಿಂದ ಬಿಯರ್ ಕಂಪನಿಗಳಿಗೆ ಸಮಸ್ಯೆಯಾಗಲಿದೆ.

ಬಿಯರ್ ಉತ್ಪಾದನೆಗೆ ಮುಖ್ಯವಾಗಿ ಬಳಕೆಯಾಗುವುದು ಬಾರ್ಲಿ. ಪ್ರಪಂಚದಲ್ಲೇ ಅತೀ ಹೆಚ್ಚು ಬಾರ್ಲಿ ಬೆಳೆಯುವ 5 ರಾಷ್ಟ್ರಗಳಲ್ಲಿ ಉಕ್ರೇನ್ ಕೂಡಾ ಒಂದು. ಈಗಾಗಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಸಜ್ಜಾಗಿ ನಿಂತಿದೆ. ಹೀಗಾಗಿ ಇತರ ದೇಶಗಳಿಗೆ ಉಕ್ರೇನ್‍ನಿಂದ ಬಾರ್ಲಿ ಸರಬರಾಜು ಕಷ್ಟಕರವಾಗಿದೆ

ಕೋವಿಡ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದಲೇ ಮದ್ಯ ಮಾರುಕಟ್ಟೆಗೆ ಹೊಡೆತ ಬಿದ್ದಿತ್ತು. ಈಗ ಲಾಕ್‍ಡೌನ್ ತೆರವಾಗಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮದ್ಯ ಉದ್ಯಮ ಚೇತರಿಕೆ ಕಾಣಲು ಆರಂಭವಾಗಿತ್ತು. ಈ ಮಧ್ಯೆ ದಿಢೀರ್ ಆಗಿ ಸೃಷ್ಟಿಯಾಗಿರುವ ರಷ್ಯಾ-ಉಕ್ರೇನ್ ಕಲಹದಿಂದ ಮತ್ತೆ ಮದ್ಯ ಮಾರುಕಟ್ಟೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. 


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ