ನವದೆಹಲಿ: ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಪ್ರತಿ ದಿನವೂ ಹೆಚ್ಚುತ್ತಿವೆ. ಸರ್ಕಾರದ ಸಬ್ಸಿಡಿಗಳು ಮತ್ತು ಹೆಚ್ಚಿನ ಇಂಧನ ಬೆಲೆಗಳ ಪರಿಣಾಮವಾಗಿ, ಇವಿಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಆದಾಗ್ಯೂ, ಗ್ರಾಹಕರ ಹೆಚ್ಚಿನ ಬೇಡಿಕೆ ಮತ್ತು ಅರೆವಾಹಕಗಳ ಕೊರತೆಯಿಂದಾಗಿ, ವಾಹನಗಳ ತಯಾರಕರು ಹೆಣಗಾಡುತ್ತಿದ್ದಾರೆ.
ತಮ್ಮ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಾಗಿ ತಿಂಗಳುಗಟ್ಟಲೆ ಕಾಯಲು ಬಯಸದ ಖರೀದಿದಾರರಿಗೆ gogoa1 ಪರ್ಯಾಯವಾಗಿ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳನ್ನು ನೀಡುತ್ತಿದೆ. ಕಳೆದ ಬಾರಿ, gogoa1ನ ಕಂಪನಿಯು ಹೀರೋ ಸ್ಪ್ಲೆಂಡರ್ ಬೈಕ್‍ವೊಂದನ್ನು ತಮ್ಮ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ನೊಂದಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಬೈಕನ್ನಾಗಿ ಮಾಡಿತ್ತು. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 151 ಕಿಮೀ ಕ್ರಮಿಸುವ ಸಾಮಥ್ರ್ಯವನ್ನು ಹೊಂದಿದೆ. ಈ ಬಾರಿ ಕಂಪನಿ ಬ್ಯಾಟರಿ ಶಕ್ತಿಯಲ್ಲಿ ಕಾರ್ಯನಿರ್ವಹಿಸುವ ಬಜಾಜ್ ಅವೆಂಜರ್ ಅನ್ನು ಪರಿಚಯಿಸುತ್ತಿದೆ.
ಬಜಾಜ್ ಅವೆಂಜರ್‌ಗಾಗಿ ಇವಿ ಕಿಟ್‍ನಲ್ಲಿ, ರೈಡರ್‌ಗೆ ಅನುಗುಣವಾಗಿ ಎಂಜಿನ್ ಮೋಡ್ ಅನ್ನು ಇವಿ ಮೋಡ್ ಆಗಿ ಬದಲಾಯಿಸಬಹುದಾಗಿದೆ. ಏಕೆಂದರೆ ಇದು ಪೆಟ್ರೋಲ್-ಎಲೆಕ್ಟ್ರಿಕ್ ಹೈಬ್ರಿಡ್ ಕಿಟ್ ಆಗಿದೆ. 27,760 ರೂ. ಬೆಲೆಯಲ್ಲಿ, ಈ ಎಲೆಕ್ಟ್ರಿಕ್ ವಾಹನ ಕನ್ವರ್ಟರ್ ಅನ್ನು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಇವಿ ಮೋಡ್‍ನಲ್ಲಿ ಬೈಕ್ ಚಲಾಯಿಸಲು ಅಗತ್ಯವಿರುವ ಎಲ್ಲಾ ಘಟಕಗಳು ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ನಲ್ಲಿವೆ.