ತಿರುವನಂತಪುರ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದರು ಎಂದು ಹೇಳಿ ಕೇರಳದ ತಿರುವನಂತಪುರದ ಸ್ವಾಮಿ ಗಂಗೇಶಾನಂದರರ ಮರ್ಮಾಂಗ ಕತ್ತರಿಸಿದ್ದ ಕಾನೂನು ವಿದ್ಯಾರ್ಥಿನಿಯ ಕೇಸ್ಗೆ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. 2017ರಲ್ಲಿ ನಡೆದಿರುವ ಈ ಘಟನೆ, ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ.
2017ರಲ್ಲಿ ತಿರುವನಂತಪುರದ 23 ವರ್ಷದ ಕಾನೂನು ವಿದ್ಯಾರ್ಥಿ ಸ್ವಾಮಿ ಗಂಗೇಶಾನಂದರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಳು. ಮೇ 19 ಮತ್ತು 20ರ ಮಧ್ಯರಾತ್ರಿ ತನ್ನ ಮನೆಯಲ್ಲಿ ಸ್ವಾಮಿ ಗಂಗೇಶಾನಂದರು ತನ್ನ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದರು. ಈ ವೇಳೆ ಅವರ ಮರ್ಮಾಂಗವನ್ನು ಕತ್ತರಿಸಿರುವುದಾಗಿ ಆಕೆ ಹೇಳಿಕೆ ನೀಡಿದ್ದಳು.