ಎಪಿಎಮ್‍ಸಿ ಮಾರುಕಟ್ಟೆ ಕಾಯ್ದೆಯನ್ನು ಮರಳಿ ಪಡೆಯುವರೆಗೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಹೇಳಿದರು.ಕಳೆದ ಎರಡು ತಿಂಗಳಿನಿಂದ ಎಪಿಎಮ್‍ಸಿ ಮಾರುಕಟ್ಟೆಯು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ರೈತರು ಸರ್ಕಾರದಿಂದ ಟೆಂಡರ್ ಮೂಲಕ ಸುಮಾರು 20 ಲಕ್ಷದಿಂದು 1 ಕೋಟಿ ರೂಪಾಯಿ ಆದಾಯ ನೀಡಿ ಪಡೆದ ಅಂಗಡಿಗಳು ಬಂದ್ ಆಗಿದ್ದರಿಂದ ವ್ಯಾಪಾರಿಗಳು ಸಂಪೂರ್ಣ ಲಾಸ್ ನಲ್ಲಿ ಇದ್ದಾರೆ. ಈ ಕೂಡಲೇ ಎಪಿಎಮ್‍ಸಿ ಕಾಯ್ದೆಯನ್ನು ಪಡೆಯಬೇಕು ಎಂದು ರೈತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನಂತರ ಮಾತನಾಡಿದ ಸಿದ್ದಗೌಡ ನೋಗಿ ಅವರು ಈವತ್ತಿಗೆ ನಮ್ಮ ಧರಣಿ ಪ್ರಾರಂಭವಾಗಿ 18 ದಿನ ಯಶಸ್ವಿಯಾಗಿ ಕಳೆದಿದೆ. ನಿನ್ನೆ ವಿಜಯಪುರದ ರೈತ ಮೊರ್ಚಾ ಅಧ್ಯಕ್ಷರು ಬಾಪುಗೌಡ ಪಾಟೀಲ ಅವರು ದೂರವಾಣಿ ಕರೆ ಮಾಡಿ ನೀವು ಬೆಳಗಾವಿಯಲ್ಲಿ ಮಾಡುತ್ತಿರುವ ಹೋರಾಟ ಕರ್ನಾಟಕ ರಾಜ್ಯದ ಕಿವಿ ತೆರೆಸುವಂತ ಕೆಲಸವಾಗುತ್ತಿದೆ. ಇದು ಕರ್ನಾಟಕ ಸರ್ಕಾರದ ಕಿವಿಗೆ ಹೋಗೋವರೆಗೂ ನಿರಂತರವಾಗಿ ಹೋರಾಟ ನಡೆಯಲಿ.ಈ ಹೋರಾಟದಲ್ಲಿ ನಾನು ನಿಮ್ಮ ಜೊತೆಗೆ ಇರುತ್ತೇವೆ ಎಂದು ತಮ್ಮ ಬೆಂಬಲ್ ವ್ಯಕ್ತ ಪಡಿಸಿದರು