Breaking News

ದಾವುದ್ ಅಲ್ಲ, ಅವರಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ: ಪ್ರಮೋದ್ ಮುತಾಲಿಕ್

Spread the love

ಬಾಗಲಕೋಟೆ: ಭಾರತದ ಮೇಲೆ ದಾಳಿ ನಡೆಸಲು ಪಾತಕಿ ದಾವುದ್ ಇಬ್ರಾಹಿಂ ಶಡ್ಯಂತ್ರ ಹಿನ್ನೆಲೆ ದಾವುದ್ ಅಲ್ಲ, ದಾವುದ್ ಅಪ್ಪ ಬಂದ್ರು ಕೂಡ ಏನು ಮಾಡಲು ಆಗುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವುದ್ ಅಲ್ಲ, ದಾವುದ್ ಅಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ. ಇವತ್ತು ನಮ್ಮ ದೇಶದ ನಾಯಕತ್ವ ಬಹಳ ಪ್ರಕಾರವಾಗಿದೆ. ನರೇಂದ್ರ ಮೋದಿ ಅವರು ನಮ್ಮ ದೇಶದ ಸುರಕ್ಷತೆಯಲ್ಲಿ ಸಮರ್ಥವಾಗಿದ್ದಾರೆ. ದಾವುದ್, ಪಾಕಿಸ್ತಾನ, ಅಘಾನಿಸ್ತಾನ ಅಲ್ಲ. ಯಾರೇ ಬಂದ್ರು ಎದುರಿಸುವ ಶಕ್ತಿ ಇದೆ. ಈಗೇನಾದರೂ ದಾವುದ್ ಮೂಲಕ ಭಯೋತ್ಪಾದನೆ, ದಾಳಿ ಮಾಡುವ ಪ್ರಕ್ರಿಯೆ ಮಾಡಿದರೆ, ದಾವುದ್ ಎಲ್ಲಿದ್ದಾನೆ ನೋಡಿಕೊಂಡು ಹುಡುಕಿ ಒಳಗೆ ಹೊಕ್ಕು ಹೊಡೆಯುವ ತಾಕತ್ತು ನರೇಂದ್ರ ಮೋದಿಗೆ ಇದೆ ಎಂದಿದ್ದಾರೆ.

ಹಲವಾರು ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರಿಸಿಕೊಂಡಿರುವ ದಾವುದ್ ಇಬ್ರಾಹಿಂ ಭಾರತದ ಮೇಲೆ ದಾಳಿ ನಡೆಸಲು ಶಡ್ಯಂತ್ರ ರೂಪಿಸಿದ್ದಾನೆ ಎಂದು ಭಾರತೀಯ ಸೇನೆ ಬಹಿರಂಗ ಪಡಿಸಿದೆ. ಈಗಾಗಲೇ ಎಲ್‍ಒಸಿಯಲ್ಲಿ ಕಾಶ್ಮೀರದೊಳಗೆ ನುಗ್ಗಲು ಅಫ್ಘನ್ ಉಗ್ರರು ಲಾಂಚ್ ಪ್ಯಾಡ್ ತಲುಪಿದ್ದಾರೆ. ಮುಖ್ಯವಾಗಿ ರಾಜಕೀಯ ಪ್ರಮುಖ ನಾಯಕರು, ನೇತಾರರು ಮತ್ತು ಪ್ರಸಿದ್ಧ ವ್ಯಾಪಾರೋದ್ಯಮಿಗಳ ಹಿಟ್‍ಲಿಸ್ಟ್ ತಯಾರಿಸಿರುವ ದಾವುದ್ ಇವರ ಮೇಲೆ ದಾಳಿ ನಡೆಸಲು ವಿಶೇಷ ತಂಡವನ್ನು ಸಿದ್ಧಪಡಿಸಿದ್ದಾನೆ. ದೇಶದ ವಿವಿಧೆಡೆ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದ್ದಾನೆ. ಅದರಲ್ಲಿಯೂ ದೆಹಲಿ ಹಾಗೂ ಮುಂಬೈ ಮೇಲೆ ಹೆಚ್ಚು ಗಮನ ಹರಿಸಿದ್ದಾನೆ ಎಂದು ಹೇಳಲಾಗುತ್ತಿದೆ


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ