Breaking News

ಮದ್ಯ ಸೇವನೆಗೆ ಹಣ ಹೊಂದಿಸಲು ಕಳ್ಳತನ, ಕುಡುಕನ ಬಂಧನ

Spread the love

ಬೆಂಗಳೂರು: ಮದ್ಯ ಸೇವನೆಗಾಗಿ ಹಣ ಸಂಗ್ರಹಿಸಲು ರಾತ್ರೋರಾತ್ರಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿ ನಗದು ದೋಚುತ್ತಿದ್ದ ವ್ಯಕ್ತಿಯನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ಎಂಬಾತ ಬಂಧಿತ ಆರೋಪಿ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಈ ಆರೋಪಿಗಳು ಹೊಟೇಲ್​​ಗಳು, ವಿವಿಧ ಮಳಿಗೆಗಳ ಬೀಗ ಹೊಡೆದು ಒಳನುಗ್ಗಿ ಕ್ಷಣಾರ್ಧದಲ್ಲಿ ಅಲ್ಲಿದ್ದ ಹಣ ಎಗರಿಸುತ್ತಿದ್ದರು. ಕಾರ್ತಿಕ್ ಜೊತೆಗೆ ಮತ್ತೊಬ್ಬ ಆರೋಪಿ ಕುಡಿತದ ಚಟಕ್ಕೆ ಬಿದ್ದಿದ್ದ. ಇಬ್ಬರೂ ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದರು. ಕಳ್ಳತನದ ಹಣದಲ್ಲಿ ಮದ್ಯ ಭರಪೂರ ಸೇವಿಸುತ್ತಿದ್ದರು. ಬೈಕ್ ಕದ್ದು ಅದೇ ಬೈಕ್​ನಲ್ಲಿ ಸಂಚರಿಸಿ ಅಂಗಡಿಗಳಿಗೆ ನುಗ್ಗಿ ಹಣ, ಬೆಳ್ಳಿಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದರು.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ