Breaking News

ಇಂದು ರಾತ್ರಿಯಿಂದಲೇ ಅಹೋರಾತ್ರಿ ಧರಣಿ: ಸಿದ್ದರಾಮಯ್ಯ ಘೋಷಣೆ

Spread the love

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಇಂದಿನಿಂದಲೇ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಧರಣಿ ಮುಂದುವರಿಸಿದ್ದೇವೆ. ಈಶ್ವರಪ್ಪರನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದೇವೆ. ಅವರು ನಮ್ಮ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ರಾಜ್ಯಪಾಲರು ಡಿಸ್ಮಿಸ್ ಮಾಡೋಕೆ ಹೇಳಬೇಕಿತ್ತು. ಸಿಎಂ ಕೂಡ ಮಾಡಬೇಕಿತ್ತು. ಇದರ ಅರ್ಥ ಆರ್​ಎಸ್​ಎಸ್ ಮೂಲಕ ಮಾಡಿಸಿದ್ದಾರೆ. ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ. ಧ್ವಜ ಹಿಡಿದಾಗ ಹೋರಾಟದ ಕಿಚ್ಚು ಬರುತ್ತೆ. ಯಾರೇ ಧ್ವಜದ ಬಗ್ಗೆ ಅಪಮಾನ ಮಾಡಿದ್ರೂ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ಮೇಲೆ ಕೇಸ್ ದಾಖಲಿಸಿಲ್ಲ. ನಡ್ಡಾ ತ್ರಿವರ್ಣದ ಧ್ವಜದ ಮೇಲೆ ಕೇಸರಿ ಬಾವುಟ ಹಾಕಿದ್ದಾರೆ. ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಗೌರವ ಕೊಡ್ತಿಲ್ಲ ಎಂದು ದೂರಿದರು.ಮಧ್ಯಪ್ರದೇಶದ ಕಚೇರಿಯಲ್ಲಿ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಹಾರಿಸ್ತಾರೆ. ಹಾಗಾಗಿ ನಾವು ಪ್ರತಿಭಟನೆ ನಡೆಸಿದ್ದೇವೆ. ಈಶ್ವರಪ್ಪ ಮಾಡಿರೋದು ಅಕ್ಷಮ್ಯ ಅಪರಾಧ. ಯಾವಾಗಲೂ ರಾಷ್ಟ್ರ ಧ್ವಜ ಹಾರಾಡಬೇಕು. ಒಬ್ಬ ಸಚಿವರಾಗಿ ಈಶ್ವರಪ್ಪ ಹೇಳುವುದು ಅಪರಾಧ. ಬಿಜೆಪಿ ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ. ಹೀಗಾಗಿಯೇ ಆಹೋರಾತ್ರಿ ಧರಣಿ ಮಾಡ್ತೇವೆ ಎಂದರು.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ