ಬೆಂಗಳೂರು : ನಾಯಿಗೆ ಇರುವ ನಿಷ್ಠೆ ಇಬ್ರಾಹಿಂಗೆ ಇದೆಯಾ ? ಇವರ ಭ್ರಷ್ಟಾಚಾರವನ್ನ ಬೆತ್ತಲುಗೊಳಿಸುತ್ತೇನೆ, ಎಲ್ಲೇ ಬೇಕಾದರೂ ಆಹ್ವಾನ ನೀಡಲಿ ಬಹಿರಂಗ ಚರ್ಚೆಗೆ ಸಿದ್ಧನಾಗಿದ್ದೇನೆ ಎಂದು ಮಾಜಿ ಸಂಸದ,ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್ ಉಗ್ರಪ್ಪ ಅವರು ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಮೇಲೆ ಬುಧವಾರ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ವಾಲ್ಮೀಕಿ ವಂಶದಲ್ಲಿ ಹುಟ್ಟಿದವನು.
ನಾನು ಎಂದೂ ಸಂಸ್ಕಾರ ಹೀನಾನಾಗಿ ಮಾತನ್ನಾಡಿಲ್ಲಇಬ್ರಾಹಿಂ ಹಳೆಯ ಸ್ನೇಹಿತರು, ನನ್ನನ್ನ ಕಕ್ಷಿದಾರನೆಂದು ಒಪ್ಪಿಕೊಂಡಿದ್ದಾರೆ. ನನ್ನ ಹೆಸರನ್ನ ವಿನಾಕಾರಣ ಎಳೆದುಕೊಂಡು ಬಂದಿದ್ದಾರೆ. ಇಬ್ರಾಹಿಂ ಸಂಸ್ಕಾರ ಹೀನರಾಗಿದ್ದಾರೆ. ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ವಿಧವೆಯಾದರೆ ಮತ್ತೆ ಮದುವೆಯಾಗಬಾರದು ಎಂಬ ಕಾನೂನು ಇದೆಯಾ ? ವಿಧವೆಯರಿಗೆ ಹೊಸ ಜೀವನ ಕೊಡುವ ಆಶಯ ಇರಬೇಕು. ಅದು ಬಿಟ್ಟು ಹೆಣ್ಣು ಕುಲಕ್ಕೆ ಅಪಮಾನ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಕೂಡಲೇ ಮಹಿಳೆಯರ ಕ್ಷಮೆಯಾಚಿಸಬೇಕು. ಇಬ್ರಾಹಿಂರನ್ನ ಬೃಹನ್ನಳೆಗೆ ಹೋಲಿಸಿದ ಉಗ್ರಪ್ಪಕರ್ನಾಟಕದಲ್ಲಿ ಯಾರಾದರೂ ಬರೆಹನ್ನಳೆ ಇದ್ದರೆ ಅದು ಇಬ್ರಾಹಿಂ ಮಾತ್ರ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ . ನಾನು ನಲ್ವತ್ತು ವರ್ಷದಿಂದ ವಕೀಲ ವೃತ್ತಿ ಮಾಡುತ್ತಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡಲಿ. ಅದನ್ನ ಎದುರಿಸುತ್ತೇನೆ. ಅವರಿಗೆ ಸಿಬಿಐ ಕ್ಲೀನ್ ಚಿಟ್ ಯಾವುದರಲ್ಲಿ ಕೊಟ್ಟಿದೆ
ರೋಲೆಕ್ಸ್ ಪ್ರಕರಣದಲ್ಲಿ ಯಾಕೆ ರಾಜೀನಾಮೆ ನೀಡಿದ್ದರು ? ವಕ್ಫ್ ಬೋರ್ಡ್ ಆಸ್ತಿಯನ್ನ ಕಬಳಿಸಿಲ್ಲವಾ ? ಆ ಜಾಗದಲ್ಲಿ ಕಟ್ಟಿರುವ ಮಳಿಗೆಗಳಿಂದ ಬರುವ ಬಾಡಿಗೆ ಪಡೆಯುತ್ತಿಲ್ಲವಾ ? ಇವರು ಪರಿಷತ್ ನಲ್ಲಿ ಸದಸ್ಯರಾಗಿದ್ದರು. ಯಾವ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ ಅನ್ನೋದನ್ನ ಹೇಳಲಿ ನೋಡೋಣ. ನಾನು ಅಕ್ರಮ ಗಣಿಗಾರಿಕೆ ಸಂಬಂಧ ವರದಿಯನ್ನ ಕೊಟ್ಟಿದ್ದೇನೆ. ಅಂಗನವಾಡಿಯ ಅಕ್ರಮದ ವರದಿಯನ್ನೂ ಕೊಟ್ಟಿದ್ದೇನೆ. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅವರು ಹಾಕುವ ಮಾನನಷ್ಟ ಮೊಕದ್ದಮೆಯನ್ನ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇನೆ ಎಂದು ಕಿಡಿ ಕಾರಿದ್ದಾರೆ.