Breaking News

ಮುಸ್ಲಿಂ ಯುವತಿಯರಿಗೆ ಹಿಜಬ್ ಧರಿಸಲು ಮುಸ್ಲಿಂ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಪ್ರೇರಣೆ ನೀಡುತ್ತಿದೆ

Spread the love

ನವದೆಹಲಿ: ಮುಸ್ಲಿಂ ಯುವತಿಯರಿಗೆ ಹಿಜಬ್ ಧರಿಸಲು ಮುಸ್ಲಿಂ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಪ್ರೇರಣೆ ನೀಡುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಹೇಳಿದ್ದಾರೆ. ಈ ಮೂಲಕ ಹಿಜಬ್ ಗಲಬೆ ಹೊಸ ತಿರುವು ಪಡೆದುಕೊಂಡಿದೆ.

ಎನ್‌ಸಿಪಿಸಿಆರ್ ತಮ್ಮ ವೆಬ್‌ಸೈಟ್‌ನಲ್ಲಿ ಮಕ್ಕಳ ಹಕ್ಕನ್ನು ಉಲ್ಲಂಘಿಸುವ ಫತ್ವಾ ವಿಷಯನ್ನು ಉಲ್ಲೇಖಿಸಿದ್ದಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಕನುಂಗೋ ತಿಳಿಸಿದ್ದಾರೆ. ಹಿಜಬ್ ಅನುಮತಿಸದ ಶಾಲೆಗಳಿಂದ ಮುಸ್ಲಿಂ ಹುಡುಗಿಯರನ್ನು ಹೊರ ಹಾಕಬೇಕು ಹಾಗೂ ಪುರುಷ ಶಿಕ್ಷಕನಿದ್ದಲ್ಲಿ ನಿರ್ದಿಷ್ಟ ವಯಸ್ಸಿನ ಬಳಿಕ ಹುಡುಗಿಯರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಬಿಡಬಾರದು ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಹೀಗಾಗಿ ಹಿಜಬ್ ಪ್ರತಿಭಟನೆಯನ್ನು ದಾರುಲ್ ಉಲೂಮ್ ದಿಯೋಬಂದ್ ಆಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.ಎನ್‌ಸಿಪಿಸಿಆರ್ ಈ ಕುರಿತು ಜನವರಿ 15ರಂದು ನೋಟಿಸ್ ಕಳುಹಿಸಿದೆ ಹಾಗೂ ಅದರ ಉತ್ತರ ಈ ವಾರ ಬರಲಿದೆ ಎಂದು ತಿಳಿಸಿದ್ದಾರೆ.

 


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ