ನೆಲಮಂಗಲ: ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಉಸಿರಾಟ ತೊಂದರೆ ಇದ್ದರೂ ಆಂಬುಲೆನ್ಸ್ ಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ
ನೆಲಮಂಗಲದ ಮಾದವಾರದಲ್ಲಿರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ಸೋಂಕಿತರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಆದರೆ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೇ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಅಲ್ಲದೆ ಉಸಿರು ಹೋಗ್ತಿದೆ ಅಂದರೂ ಇಲ್ಲಿ ಡೋಂಟ್ ಕೇರ್ ಎಂದಿದ್ದಾರೆ. ಉಸಿರಾಡಲು ಆಗ್ತಿಲ್ಲ ಅಂತ ಗೋಗರೆದರೂ ಸಿಬ್ಬಂದಿ ಮಾತ್ರ ಫೋನ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಇನ್ನು ಅಂಬುಲೆನ್ಸ್ ಬಂದರೂ ಬಿಬಿಎಂಪಿ ಅಧಿಕಾರಿಗಳು ಆಕ್ಸಿಜನ್ ವ್ಯವಸ್ಥೆ ನೀಡಿಲ್ಲ. ಈ ಮೂಲಕ ಕೊರೊನಾ ಸೋಂಕಿತರಿಗೆ ಇಲ್ಲ ಆಕ್ಸಿಜನ್ ವ್ಯವಸ್ಥೆ ಸಿಗುತ್ತಿಲ್ಲ. ಎಲ್ಲಾ ವ್ಯವಸ್ಥೆ ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ಆದರೆ ಗಂಟೆಗಟ್ಟಲೆ ಕಾದರೂ ಆಕ್ಸಿಜನ್ ವ್ಯವಸ್ಥೆ ನೀಡಿಲ್ಲ.