Breaking News

ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶಕ್ಕೆ ಯತ್ನಿಸಿರುವ ಖಾಸಗಿ ಬಸ್

Spread the love

ಚಿಕ್ಕೋಡಿ: ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶಕ್ಕೆ ಯತ್ನಿಸಿರುವ ಖಾಸಗಿ ಬಸ್ ಕಂಪನಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಕಳ್ಳದಾರಿಯ ಮೂಲಕ ಆರ್‍ಟಿಸಿಪಿಆರ್ ವರದಿ ಇಲ್ಲದೆ ಮುಂಬೈನಿಂದ ಬೆಂಗಳೂರಿಗೆ 17 ಜನ ಪ್ರಯಾಣಿಕರನ್ನು ಖಾಸಗಿ ಕಂಪನಿ ಬಸ್ ರಾಜ್ಯಕ್ಕೆ ಕರೆತರುತ್ತಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಬಳಿ ಬಸ್‍ನನ್ನು ಪೊಲೀಸರು ತಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಪ್ರಸ್ತುತ ಬಸ್ ಕಂಪನಿಯ ಮ್ಯಾನೇಜರ್, ಮೇಲ್ವಿಚಾರಕ ಅಸ್ಲಂ ಉಲ್ಖಾನ್, ನೇಮುತ್ತಮ್ ಖಾನ್, ಕ್ಲೀನರ್ ಟಿಪ್ಪು ಸುಲ್ತಾನ್ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ಎಂಬ ನಿಯಮ ಮಾಡಿದೆ. ಆ ನಿಯಮವನ್ನು ಖಾಸಗಿ ಬಸ್ ಉಲ್ಲಂಘಿಸಿ, ಕೋವಿಡ್ ವರದಿ ಇಲ್ಲದೆ ಪ್ರಯಾಣಿಕರನ್ನು ತುಂಬಿಕೊಂಡು ಕಳ್ಳ ಮಾರ್ಗದಿಂದ ಬರುತ್ತಿತ್ತು

ಈ ವೇಳೆ ಪೋಲಿಸರು ಬಸ್ ತಡೆಹಿಡಿದಿದ್ದು, ಪದೇ-ಪದೇ ಆದೇಶ ಉಲ್ಲಂಘನೆ ಮಾಡುತ್ತಿದ್ದ ಬಸ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶರ್ಮಾ ಟ್ರಾವೆಲ್ಸ್ ನ್ಯಾಷನಲ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ